ಟೆಸ್ಟ್,ಟಿ-20, ಏಕದಿನ ಪಂದ್ಯಾವಳಿಯ ರ಼್ಯಾಂಕಿಗ್’ನಲ್ಲಿ ಬಾಬರ್ ಅಝಾಮ್ ನಂಬರ್ ಒನ್ ಆಗಲಿದ್ದಾರೆ ಎಂದ ದಿನೇಶ್ ಕಾರ್ತಿಕ್!

ನವದೆಹಲಿ: ಪಾಕಿಸ್ತಾನದ ಖ್ಯಾತ ಕ್ರಿಕೆಟ್ ಬ್ಯಾಟ್ಸ್‌ಮನ್ ಬಾಬರ್ ಅಝಮ್ ಕ್ರಿಕೆಟ್ ನ ಮೂರು ಫಾರ್ಮೆಟ್ ನಲ್ಲಿ ನಂಬರ್ ಒನ್ ಆಟಗಾರರಾಗಿ ಮೂಡಿ ಬರಲಿದ್ದಾರೆಂದು ಭಾರತ ತಂಡದ ದಿನೇಶ್ ಕಾರ್ತಿಕ್ ಅಭಿಪ್ರಾಯ ಪಟ್ಟಿದ್ದಾರೆ.

ಬಾಬರ್ ಅಝಾಮ್ ಈಗಾಗಲೇ ಏಕದಿನ ಮತ್ತು ಟಿ-20 ಪಂದ್ಯಾವಳಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದು ಟೆಸ್ಟ್ ನಲ್ಲೂ ಅಗ್ರಸ್ಥಾನಕ್ಕೆ ಏರಿ ಇತಿಹಾಸ ನಿರ್ಮಿಸಲಿದ್ದಾರೆ ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯ ಪಟ್ಟಿದ್ದಾರೆ.

ಪಾಕಿಸ್ತಾನ ತಂಡಕ್ಕೆ ಬಾಬರ್ ಅಝಾಮ್ ಅತ್ಯುತ್ತಮ ನಿರ್ವಹಣೆ ನೀಡುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ತಂಡವೂ ಅವರ ಸಾಧನೆಗೆ ಪೂರಕವಾಗಿ ಬೆಂಬಲ ನೀಡುತ್ತಿದ್ದು, ಎಲ್ಲ ವಿಭಾಗದಲ್ಲೂ ಬ್ಯಾಟ್ ಬೀಸಲು ಅವಕಾಶ ನೀಡಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ಶೈಲಿಯನ್ನು ಶ್ಲಾಘಿಸಿದರು.

Latest Indian news

Popular Stories