ನಗರದಲ್ಲಿ ಇದೂವರೆಗೆ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ: ಗೌರವ್ ಗುಪ್ತಾ

ಬೆಂಗಳೂರು: ನಗರದಲ್ಲಿ ಕೋವಿಡ್-19 ನಿಂದಾಗಿ ಇದೂವರೆಗೆ ಯಾವುದೇ ಸಾವುಗಳೂ ಸಂಭವಿಸಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಇತರ ಕಾಯಿಲೆಗಳಿಂದಾಗಿ ಸಾವುಗಳು ಸಂಭವಿಸಿವೆ, ಆದರೆ, ಸಾವಿನ ವೇಳೆ ಕೊರೋನಾ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಸಾವುಗಳನ್ನು COVID-19 ಅಡಿಯಲ್ಲಿ ಲೆಕ್ಕಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಆಕಸ್ಮಿಕ ಸಾವುಗಳು, ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ವಯೋಸಹಜ ಕಾಯಿಲೆಗಳಿಂದ ಸಾವನ್ನಪ್ಪಿದ ಪ್ರಕರಣಗಳು ಇವೆ. ಜನರನ್ನು ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸುವ ಮೊದಲು ಮತ್ತು ಅವರನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸುವ ಮೊದಲು ಅವರನ್ನು ಟ್ರೀಯಾಜಿಂಗ್ ಮಾಡಲು ಒತ್ತು ನೀಡಲಾಗುತ್ತಿದೆ. ಟೆಲಿ-ಟ್ರೈಜಿಂಗ್ ಮಾಡುವುದನ್ನು ಹೊರತುಪಡಿಸಿ, ಪ್ರತಿದಿನ 310 ಟ್ರಯಜಿಂಗ್ ತಂಡಗಳು ಸುಮಾರು 3,000 ಜನರನ್ನು ಪರೀಕ್ಷೆ ನಡೆಸಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.

ಜನಸಂದಣಿ ಇರುವ ಸ್ಥಳಗಳಿಂದ ಜನರು ದೂರವಿರಬೇಕು. ಮತ್ತು ಯಾವುದೇ ರೋಗಲಕ್ಷಣಗಳು ಕಂಡು ಬಂದರೂ ಪರೀಕ್ಷಿಸಿಕೊಳ್ಳುವಂತೆ ಜನರಿಗೆ ಸಲಹೆ ನೀಡಿದ್ದಾರೆ.

ಮನೆ ಬಾಗಿಲಿನಲ್ಲೇ ಸ್ಯಾಂಪಲ್ ಸಂಗ್ರಹಿಸಲು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಅದೇ ರೀತಿ ವೈದ್ಯಕೀಯ ವರದಿ ಕೂಡ ಜನರ ಮನೆ ಬಾಗಿಲಿಗೇ ತಲುಪಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಲಿರುವ ಸಭೆಯಲ್ಲಿ, ಎಲ್ಲ ವಿವರಗಳನ್ನು ತಜ್ಞರ ಮುಂದೆ ಇಡಲಾಗುವುದು, ಅದರ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

Latest Indian news

Popular Stories