ನಿರಾಶ್ರಿತ ಮಹಿಳೆಯನ್ನು ಮತ್ತೆ ಪತಿಯೊಂದಿಗೆ ಜೋಡಿಸಿದ ಮಡಿಕೇರಿಯ ತನಲ್ ಆಶ್ರಮ!

ಮಡಿಕೇರಿ: (ದಿ ಹಿಂದುಸ್ತಾನ್ ಗಝೆಟ್) : ನಿರಾಶ್ರಿತರ ಬಾಳಿಗೆ ಬೆಳಗಾಗುತ್ತಿರುವ ಮಡಿಕೇರಿಯ ತನಲ್ ಆಶ್ರಮದಲ್ಲಿ ಇದೀಗ ಮತ್ತೊಂದು ಅಪೂರ್ವ ಸಂಗಮಕ್ಕೆ ಕಾರಣವಾಗಿದೆ.

ಸುಮಾರು ನಾಲ್ಕು ವರುಷಗಳ ಹಿಂದಿನ ಸಂಗತಿ.ಕೊಡಗಿನ ವಾಣಿಜ್ಯ ನಗರಿ ಕುಶಾಲನಗರಲ್ಲಿ ಹಲವು ದಿನಗಳಿಂದ ಅಲ್ಲಲ್ಲಿ ಹರಿದ ರವಿಕೆ ಸೀರೆ ಕೆದರಿದ ಕೂದಲು ಮಾನಸಿಕ ಅಸ್ವಸ್ಥತೆಯಂತೆ ಏನನ್ನೋ ಬಡಬಡಿಸುತ್ತಾ ರಸ್ತೆ ಬದಿಗಳಲ್ಲಿ ತಿರುಗಾಡುತ್ತಾ ಇದ್ದ ಮಹಿಳೆಯೊಬ್ಬರನ್ನು ಅಲ್ಲಿನ ಪೋಲಿಸರು ವಿಚಾರಿಸಿದಾಗ ಹಿಂದಿ ಬಾಷೆಯಲ್ಲಿ ಮಾತನಾಡಿ ಸರಿಯಾದ ಮಾಹಿತಿ ಸಿಗದೇ ಮಡಿಕೇರಿಯ ತನಲ್ ವ್ಯವಸ್ಥಾಪಕರಾದ ಮುಹಮ್ಮದ್ ಮುಸ್ತಾಫ ಅವರನ್ನು ಸಂಪರ್ಕಿಸಿ ಆಶ್ರಮಕ್ಕೆ ಸೇರಿಸಲಾಗಿತ್ತು.ಮುಂದೆ ಅವರಿಗೆ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದ್ದು ತನಲ್ ಆಶ್ರಮ.

ನಂತರ ತನಲ್ ಆಶ್ರಮದಿಂದ ಮತ್ತೆ ಆ ಮಹಿಳೆಯ ಕುಟುಂಬದೊಂದಿಗೆ ಮರು ಜೋಡಿಸುವ ಕುರಿತು ಚಿಂತನೆ ನಡೆದಿತ್ತು.ಕಳೆದ ಆರು ತಿಂಗಳಿನಿಂದ ಅವರ ವಿಳಾಸವನ್ನು ಹುಡುಕುತ್ತಾ ದೆಹಲಿ ಮತ್ತು ಹರಿಯಾಣ ಪೊಲೀಸರನ್ನು
ಸಂಪರ್ಕಿಸಿ ಈಗ ಅವರ ಪತಿ ಕೆ.ಆರ್ ಸಿಂಗ್’ರೊಂದಿಗೆ ದರ್ಶಿನಿಯನ್ನು ಬಿಳ್ಕೋಡಲಾಗಿದೆ.

ತನಲ್ ಆಶ್ರಮದ ಈ ಶ್ಲಾಘನೀಯ ಕಾರ್ಯಕ್ಕೆ ವ್ಯಾಪಕ ‌ಪ್ರಶಂಸೆ ವ್ಯಕ್ತವಾಗಿದೆ.

Latest Indian news

Popular Stories