ಬ್ರಹ್ಮಾವರದಲ್ಲಿ ಆನ್ಲೈನ್ ವಂಚನೆಗೆ 17 ಲಕ್ಷ ಕಳೆದುಕೊಂಡ್ರು – ಟ್ರೇಡಿಂಗ್ ನೆಪದಲ್ಲಿ ಪಂಗನಾಮ!

ಉಡುಪಿ: ಜಿಲ್ಲೆಯಲ್ಲಿ ಸೈಬರ್ ಅಪರಾಧಗಳು ಹೆಚ್ಚು ಸದ್ದು ಮಾಡುತ್ತಿದ್ದು ಆನ್ಲೈನ್ ವಂಚಕರು ಅಮಾಯಕರನ್ನು ಯಾಮರಿಸಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆಯುತ್ತಿದ್ದಾರೆ.

ಇದೀಗ ಬ್ರಹ್ಮಾವರದ ವ್ಯಕ್ತಿಯೊಬ್ಬರಿಗೆ ಬರೊಬ್ಬರಿ 17 ಲಕ್ಷ ರೂಪಾಯಿ ಟ್ರೇಡಿಂಗ್ ಹೆಸರಿನಲ್ಲಿ ವಂಚಿಸಲಾಗಿದೆ.

ಸಂತ್ರಸ್ಥ ಸುಬ್ರಹ್ಮಣ್ಯ ರವರಿಗೆ ಮೇ 6 ರಂದು Instagram ನಲ್ಲಿ ಆರೋಪಿಯು  Online Part time Job & Online Trading ಎಂದು ಮೇಸಜ್‌ ಮಾಡಿದ್ದು ಹಾಗೂ ಸಂತ್ರಸ್ಥರಿಗೆ  Watsapp 8692018071 ನಂಬರ್‌ ಗೆ ಮೇಸೆಜ್‌ ಮಾಡಲು ಹೇಳಿದ್ದಾನೆ. ಅದರಂತೆ ಆರೋಪಿಯು ತಿಳಿಸಿದ ಮೊಬೈಲ್‌ ನಂಬರಿಗೆ ಮೇಸೆಜ್‌ ಮಾಡಿದಾಗ ಸಂತ್ರಸ್ಥರಿಗೆ ಕೆಲವೊಂದು ಟಾಸ್ಕ್ ಕೊಟ್ಟು,  Task ಕಂಪ್ಲೀಟ್‌ ಆಗಿದೆ ಎಂದು ಹೇಳಿ ಆರೋಪಿಯು ಫಿರ್ಯಾದಿಗೆ IMPS ಮೂಲಕ ರೂ.120/-,  ರೂ. 1300/- ಮತ್ತು ರೂ. 7800/- ಹಣವನ್ನು ಕಳುಹಿಸಿದ್ದಾನೆ.

ಇದಾದ ನಂತರ ಸಂತ್ರಸ್ಥರು ಟ್ರೇಡಿಂಗ್‌ ಮಾಡುವ ಸಲುವಾಗಿ ಆರೋಪಿಯು ಪೇಮೆಂಟ್‌ ಮಾಡಲು ಹಾಗೂ  ಇನ್ನೂ ಹೆಚ್ಚಿನ ಹಣ ಬರಲು ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದಾನೆ. ಹಣ ಹೂಡಿಕೆ ಮಾಡಿದ ನಂತರ ಸಂತ್ರಸ್ಥರ ಅಕೌಂಟ್‌ freeze ಆಗಿದೆ,  A/C Unfreeze ಮಾಡಲು ಹಣ ಕಟ್ಟುವಂತೆ  ದಿನಾಂಕ   06.05.2024 ರಿಂದ ದಿನಾಂಕ 09.05.2024 ರ ಮಧ್ಯಾವಧಿಯಲ್ಲಿ  ಸಂತ್ರಸ್ಥರ ಹಾಗೂ ಅವರ ಹೆಂಡತಿ ಅನುಷಾ, ಅತ್ತೆ ಜ್ಯೋತಿ ಯವರ ಅಕೌಂಟ್‌ ನಿಂದ ಕ್ರಮದಂತೆ Telegram (Swetasingshamar), Meet Construction, ರಮೇಶ್‌ ಕುಮಾರ್‌ ರವರ ಅಕೌಂಟ್‌ ನಂಬರ್‌ 42931451170, Tech Genious Solution ಅಕೌಂಟ್‌, Anisha Enterprises, More Anil, Pooja Samagri Store, Mahesh Trading Company, M/s Sanajit Enterprises, Jaya Kishanchand, Robi online Sales, Sumit Singh, Jaya Kishanchand motwani, Uday Digitalway OPC Pvt  Ltd. A/C 1776002100002723 ಗೆ  ಒಟ್ಟು ರೂ 17,35,000/ ಹಣವನ್ನು ಆರೋಪಿಯು ಪಡೆದುಕೊಂಡು ಬರಬೇಕಾಗಿದ್ದ ಹಣದ ಬಗ್ಗೆ ಯಾವುದೇ ಮಾಹಿತಿ ನೀಡದೆ ನಂಬಿಸಿ ವಂಚಿಸಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 125/2024 : ಕಲಂ  420 ಐಪಿಸಿ & 66(C), 66(D) IT ACT ನಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories