ವಿಜಯಪುರ: ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಭಜರಂಗದಳ ಕಾರ್ಯಕರ್ತೆ ವಿರುದ್ಧ ಪ್ರಕರಣ ದಾಖಲು

ವಿಜಯಪುರ: ವಿಜಯಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಹಿಂದೂ ಕಾರ್ಯಕರ್ತೆ ಪೂಜಾ ವೀರಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

ಫೆಬ್ರವರಿ 23 ರಂದು ಭಜರಂಗದಳ, ವಿಎಚ್‌ಪಿ ನೇತೃತ್ವದಲ್ಲಿ ವಿಜಯಪುರದಲ್ಲಿ ಪ್ರತಿಭಟನೆ ನಡೆದಿತ್ತು.ಈ ವೇಳೆ ಮಾತನಾಡಿದ್ದ ಪೂಜಾ ‘ಭಾರತವನ್ನು ಹಿಜಾಬ್ ಮಾಡಲು ಬಂದರೆ ತುಂಡು ತುಂಡಾಗಿ ಕತ್ತರಿಸುತ್ತೇವೆ. ಒಂದು ಗಂಟೆ ನಮ್ಮ ಕೈಗೆ ಸರ್ಕಾರ ಕೊಟ್ಟರೆ 60 ಸಾವಿರ ಜನರನ್ನು ಕತ್ತರಿಸುತ್ತೇವೆ ಎಂದಿದ್ದರು.

ಅವರ ಮೇಲೆ ಕೇಸ್‌ ದಾಖಲಿಸಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿಬಂದಿತ್ತು. ಕೋಮು ಸೌಹಾರ್ದತಗೆ ಧಕ್ಕೆ ತರುವ ಮಾತುಗಳ ಹಿಂದೆ ಯಾರೋ ಇದ್ದಾರೆ. ಈಕೆಗೆ ಯಾರೋ ಉಪದೇಶ ಮಾಡಿ ಈ ರೀತಿ ಹೇಳಿಸಿಸಿದ್ದಾರೆ. ಸಮಗ್ರ ತನಿಖೆಯಾಗಬೇಕು ಎಂದು ಬಹಳಷ್ಟು ಜನ ಆಗ್ರಹಿಸಿದ್ದರು. ಹೀಗಾಗಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಜಯಪುರದ ಗೋಳಗುಮ್ಮಟ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು. ಕಲಂ 295A, 505/2 ಹಾಗೂ 506 ಅಡಿಯಲ್ಲಿ ಪೂಜಾ ವೀರಶೆಟ್ಟಿ ವಿರುದ್ಧ ಕೇಸ್ ದಾಖಲಾಗಿದೆ. ಹಿಜಾಬ್ ವಿವಾದವನ್ನು ಉಲ್ಲೇಖಿಸುವಾಗ ಪೂಜಾ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ್ದರು. ಹಿಂದೂ ಸಂಘಟನೆಗಳು ಹಿಂದೂಸ್ತಾನವನ್ನು ಹಿಜಾಬ್ ರಾಷ್ಟ್ರವಾಗಲು ಬಿಡುವುದಿಲ್ಲ ಎಂದು ಅವರು ಹೇಳಿದರು.

ಪೂಜಾ ವಿರುದ್ಧ ಪ್ರಕರಣ ದಾಖಲಿಸಲು ವಿಳಂಬವಾದ ಬಗ್ಗೆ ಪ್ರತಕ್ರಿಯಿಸಿದ ಎಸ್ ಪಿಎಚ್.ಡಿ ಆನಂದ್ ಕುಮಾರ್, ಆಕೆ ಅಪ್ರಾಪ್ತಳೆಂಬ ಬಗ್ಗೆ ನಮಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. ಅಪ್ರಾಪ್ತರ ವಿಚಾರಣೆಯೇ ಬೇರೆ ರೀತಿಯಾಗಿರುತ್ತದೆ ಎಂದು ಹೇಳಿದ್ದಾರೆ.

ಪ್ರಾಥಮಿಕ ವಿಚಾರಣೆ ವೇಳೆ ಆಕೆಯ ಗುರುತು ಪತ್ತೆಯಾಗಿದ್ದು, ತಕ್ಷಣವೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೇವೆ.” ಪ್ರಕರಣ ದಾಖಲಿಸುವಂತೆ ಪೊಲೀಸರ ಮೇಲೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದು ಹೇಳಿದ್ದಾರೆ. .ಆರೋಪಿಯನ್ನು ಬಂಧಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾನು ಬಹಿರಂಗಪಡಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

Latest Indian news

Popular Stories