ಬೆಂಗಳೂರು: ಪ್ರಸಕ್ತ ಸಾಲಿನ ಹಜ್ ಯಾತ್ರೆಗೆ ಭಾರತದ ಹಜ್ ಸಮಿತಿಯು ರಾಜ್ಯದಿಂದ 10,500 ಮಂದಿಯನ್ನು ಆಯ್ಕೆ ಮಾಡಿದೆ.
ಕರ್ನಾಟಕ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಜ್ ಖಾನ್ ಮಾತನಾಡಿ, ಕಳೆದ ವರ್ಷ 7,500 ಅರ್ಜಿಗಳು ಬಂದಿದ್ದವು. ಈ ವರ್ಷ 3,000 ಅರ್ಜಿಗಳು ಹೆಚ್ಚಾಗಿ ಬಂದಿವೆ. ಸಮಿತಿಯು 80,000 ರೂಪಾಯಿಗಳ ಮುಂಗಡ ಪಾವತಿ ಮಾಡುವಂತೆ ಅರ್ಜಿದಾರರಿಗೆ ಸಂದೇಶಗಳನ್ನು ರವಾನಿಸುತ್ತಿದೆ. ಜಿಲ್ಲಾವಾರು ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ವರ್ಷ, ರಾಜ್ಯ ಹಜ್ ಸಮಿತಿಯು ಯಾತ್ರೆಗಾಗಿ 13,500 ಅರ್ಜಿಗಳನ್ನು ಸ್ವೀಕರಿಸಿದ್ದು, ಆದಾಗ್ಯೂ 10,500 ಮಂದಿಯನ್ನು ಮಾತ್ರ ಯಾತ್ರೆಗೆ ಕಳುಹಿಸಲಾಗುತ್ತಿದೆ, ಮೀಸಲಾತಿ ಅಡಿಯಲ್ಲಿ ಈ ಅವಕಾಶವನ್ನು ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು, ಮಂಗಳೂರು, ಗೋವಾ ಮತ್ತು ಹೈದರಾಬಾದ್‌ಗಳನ್ನು ಕರ್ನಾಟಕ ಮೂಲದ ಯಾತ್ರಾರ್ಥಿಗಳಿಗೆ ಎಂಬಾರ್ಕೇಶನ್ ಪಾಯಿಂಟ್‌ಗಳಾಗಿ ಗುರುತಿಸಲಾಗಿದ್ದು, ಸಮಿತಿಯು ರಾಜ್ಯಕ್ಕೆ ಎಂಬಾರ್ಕೇಶನ್ ಪಾಯಿಂಟ್‌ಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ . ಯಾತ್ರಾರ್ಥಿಗಳಿಗೆ ವಿಮಾನಗಳನ್ನು ನಿರ್ವಹಿಸಲು ವಿಮಾನಯಾನ ಸಂಸ್ಥೆಗಳಿಗೆ ಟೆಂಡರ್‌ಗಳನ್ನು ಕರೆಯಲು ಸಿದ್ಧತೆಗಳನ್ನು ಸಮಿತಿ ನಡೆಸುತ್ತಿದೆ. ಉತ್ತಮ ದರ ನೀಡುವವರನ್ನು ವಿಮಾನಯಾನ ಸಂಸ್ಥೆಗಳನ್ನು ಇಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.