ಸಜ್ಜದ್ ನೊಮಾನಿಯಿಂದ ಒವೈಸಿಗೆ ಬಹಿರಂಗ ಪತ್ರ

ಹೈದರಾಬಾದ್: ಮುಸ್ಲಿಂ ಧರ್ಮಗುರು ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಖಲೀಲ್-ಉರ್-ರಹಮಾನ್ ಸಜ್ಜದ್ ನೊಮಾನಿ ಅವರು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಎ-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಯಲ್ಲಿ 100 ಸ್ಥಾನಗಳಲ್ಲಿ ಸ್ಪರ್ಧಿಸುವ ಪಕ್ಷದ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ್ದಾರೆ.

ಮೌಲಾನಾ ಖಲೀಲ್-ಉರ್-ರೆಹಮಾನ್ ಸಜ್ಜದ್ ನೊಮಾನಿ ಅವರು ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರಿಗೆ 2022 ರ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಫ್ಯಾಸಿಸ್ಟ್ ಶಕ್ತಿಗಳಿಗೆ ಲಾಭವಾಗುವಂತಹ ರೀತಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಬಹಿರಂಗ ಪತ್ರ ಬರೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಯಲ್ಲಿ ಎಐಎಂಐಎಂ 100 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತ್ತು ಎಂದು ಧರ್ಮಗುರುಗಳು ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಆದರೆ ಪಕ್ಷದ ಜನಪ್ರಿಯತೆಯ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗುವ ಸಾಧ್ಯತೆಯಿದೆ. ಇದು ಮತೀಯ ಶಕ್ತಿಗಳಿಗೆ ಲಾಭವಾಗಬಹುದು ಎಂಬ ಊಹಾಪೋಹವಿದೆ.

2022 ರ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಮತ ವಿಭಜನೆ ಕಡಿಮೆ ಮಾಡಲು ಮೌಲಾನಾ ಅವರು  ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರನ್ನು ವಿನಂತಿಸಿದ್ದಾರೆ.

ಮುಸ್ಲಿಮರ, ಹಿಂದುಳಿದ ವರ್ಗಗಳ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕೆಂದು ಒವೈಸಿಗೆ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಹಿಂದುಳಿದ ವರ್ಗದ ಜನರು ಮತೀಯ ಶಕ್ತಿಗಳ ವಿರುದ್ಧ ನಿಂತಾಗ, ಈ ದಬ್ಬಾಳಿಕೆಯ ಶಕ್ತಿಗಳನ್ನು ಸೋಲಿಸಬಹುದಾಗಿದೆ. ನೀವು ನನ್ನ ವಿನಂತಿಯನ್ನು ಒಪ್ಪಿದರೆ ಮತಗಳ ಹಂಚಿಕೆಯನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ಮೌಲಾನಾ ಪತ್ರದಲ್ಲಿ “ನನ್ನ ಅಭಿಪ್ರಾಯದಲ್ಲಿ ನೀವು ಗೆಲುವು ಖಚಿತವಾಗಿರುವ ಸ್ಥಾನಗಳಲ್ಲಿ ಮಾತ್ರ ನಿಮ್ಮ ಸಂಪೂರ್ಣ ಶಕ್ತಿಯನ್ನು ಬಳಸಬೇಕು ಮತ್ತು ಉಳಿದ ಸ್ಥಾನಗಳಲ್ಲಿ ನೀವೇ ಮೈತ್ರಿಗೆ ಮನವಿ ಮಾಡಿಕೊಳ್ಳಿ” ಎಂದು ಬರೆದಿದ್ದಾರೆ.

ಮೌಲಾನಾ ಅವರು ತಮ್ಮ ಪತ್ರದಲ್ಲಿ, “ನೀವು ಇದನ್ನು ಮಾಡಿದರೆ, ನಿಮ್ಮ ಜನಪ್ರಿಯತೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದು ನಿಮ್ಮ ಮೂಲ ಧ್ಯೇಯಕ್ಕಾಗಿ ಚುನಾವಣೆಯ ನಂತರ ತಕ್ಷಣವೇ ಪ್ರಾರಂಭಿಸುವ ಪ್ರಯತ್ನದ ಕಡೆಗೆ ಯಶಸ್ಸು ಸಾಧಿಸಬಹುದಾಗಿದೆ ಎಂದರು.

“ಸಮುದಾಯ ಮತ್ತು ದೇಶದ ಹಿತದೃಷ್ಟಿಯಿಂದ ನಾನು ನಿಮಗೆ ಈ ಮನವಿಯನ್ನು ಮಾಡುತ್ತಿದ್ದೇನೆ” ಎಂದು ಅವರು ಹೇಳಿದರು.

Latest Indian news

Popular Stories