ಬಿಜೆಪಿ ಮೈತ್ರಿ ಪಕ್ಷ ಟಿಡಿಪಿಯಿಂದ ಮುಸ್ಲಿಮರಿಗೆ 4% ಮೀಸಲಾತಿಯ ಭರವಸೆ

ಧರ್ಮಾವರಂ, ಆಂಧ್ರಪ್ರದೇಶ: ಬಿಜೆಪಿಯ ಮೈತ್ರಿ ಪಕ್ಷ ಟಿಡಿಪಿ ಮುಸ್ಲಿಮರಿಗೆ 4% ಮೀಸಲಾತಿ ಕೊಡುವುದಾಗಿ ಘೋಷಿಸಿದೆ. ಮುಸ್ಲಿಮರ ಮೀಸಲಾತಿ ಕಿತ್ತುಕೊಂಡು ಒಬಿಸಿಗೆ ಮೀಸಲಾತಿ ಹೆಚ್ಚಿಸುವ ಕುರಿತು ಬಿಜೆಪಿ ಮುಖಂಡರು ಮಾತನಾಡುತ್ತಿರುವ ಈ ಸಂದರ್ಭದಲ್ಲಿ ಈ ಬೆಳವಣಿಗೆ ಕೂತುಹಲ ಮೂಡಿಸಿದೆ.

ರಾಜ್ಯದಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ನೀಡುವುದಾಗಿ ಮಾಜಿ ಸಿಎಂ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ. “ಮೊದಲಿನಿಂದಲೂ, ನಾವು 4% ಮೀಸಲಾತಿಯನ್ನು ಬೆಂಬಲಿಸುತ್ತೇವೆ, ಈ ನಿರ್ಧಾರವನ್ನಿ ಇದನ್ನು ಮುಂದುವರಿಸುತ್ತೇವೆ…” ಎಂದು ಮಾಧ್ಯಮ ಪ್ರತಿನಿಧಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ಇದೀಗ ಬಿಜೆಪಿಯ ನಿಲುವು ಮತ್ತು ಟಿಡಿಪಿ ನಿಲುವು ಪರಸ್ಪರ ಭಿನ್ಮವಾಗಿದ್ದು ಬಿಜೆಪಿ ಇದರ ಕುರಿತು ಯಾಚ ರೀತಿ ಪ್ರತಿಕ್ರಿಯಿಸಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ.

Latest Indian news

Popular Stories