ಉಡುಪಿ: ಮುಂಗಾರು ಪೂರ್ವ ಮಳೆಯಿಂದ ಬತ್ತಿದ್ದ ನದಿಗಳಲ್ಲಿ ಮತ್ತೆ ಝುಳು ಝುಳು ಕಲರವ!

ಉಡುಪಿ (ದಿ ಹಿಂದುಸ್ತಾನ್ ಗಝೆಟ್) : ಜೀವ ರಾಶಿಗೆ ನೀರು ಎಷ್ಟು ಅಮೂಲ್ಯ ಎಂಬುವುದು ಪ್ರಕೃತಿ ಈ ಬಾರಿ ಸಾಕ್ಷಾತ್ಕಾರಿಸಿತು. ಕಳೆದ ಬಾರಿಯ ಮಳೆ ಅಭಾವ ಈ ಬಾರಿ ಬೇಸಿಗೆಯಲ್ಲಿ ತೀವ್ರ ನೀರಿನ ಕೊರತೆಯನ್ನು ಉಂಟು ಮಾಡಿತ್ತು. ಸ್ಥಳಿಯಾಡಳಿತ ಉಡುಪಿ ನಗರದಲ್ಲಿ ರೇಷನಿಂಗ್ ಪದ್ದತಿಯಲ್ಲಿ ನೀರು ಕೊಡುವ ಪರಿಸ್ಥಿತಿ ಉದ್ಭವವಾಗಿತ್ತು. ಇಂತಹ ಸಂಕಷ್ಟದ ಸಮಯದಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಜಿಲ್ಲೆಯ ಜನತೆಯ ಪಾಲಿಗೆ ಬಿಗ್ ರಿಲೀಫ್ ಒದಗಿಸಿದೆ.

ನಿರಂತರವಾಗಿ ಪಶ್ಚಿಮ ಘಟ್ಟ ಮತ್ತು ಉಡುಪಿ ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ನದಿ, ಹಳ್ಳ, ತೊರೆ, ಬಾವಿಗಳು ತುಂಬಿಕೊಂಡು ನೀರಿನ ಮಟ್ಟದಲ್ಲಿ ಏರಿಕೆ ಕಾಣಿಸಿಕೊಂಡಿದೆ.ಕಳೆದ ಒಂದು ವಾರದಿಂದ
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕಾರ್ಕಳ, ಹೆಬ್ರಿ
ಪಶ್ಚಿಮಘಟ್ಟ ಭಾಗದಲ್ಲಿ ನಿರಂತರ ಮಳೆ ಪರಿಣಾಮ
ನದಿಗಳಿಗೆ ಜೀವ ಕಳೆ ಬಂದಿದೆ.

ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ವಿಪರೀತ
ಉಷ್ಣಾಂಶ, ಬೇಸಗೆ ಬಿಸಿಲಿನಿಂದ ನದಿಗಳ ನೀರು ಬತ್ತಿ
ಹೋಗಿದ್ದು ಸೀತಾ, ಸ್ವರ್ಣಾ, ಪಾಪನಾಶಿನಿ, ಇಂದ್ರಾಣಿ
ನೀರು ಬಹುತೇಕ ಖಾಲಿಯಾಗಿ ಕೃಷಿ ಭೂಮಿ,
ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿತ್ತು.
ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹೋಗಿ
ಬಾವಿ, ಬೋರ್‌ವೆಲ್‌ ಗಳಲ್ಲಿಯೂ ನೀರಿನ ಕುಸಿದು
ನೀರಿನ ಕೊರತೆ ಉಂಟಾಗಿತ್ತು. ಪರಿಣಾಮ ನಗರ,
ಗ್ರಾಮಾಂತರ ಭಾಗದಲ್ಲಿ ಹೊಟೇಲ್, ರೆಸ್ಟೋರೆಂಟ್,
ಲಾಡ್ಜ್ ಹಾಸ್ಟೆಲ್, ಆಸತ್ರೆ, ದೇವಸ್ಥಾನ, ಕೈಗಾರಿಕೆ
ಘಟಕಗಳಲ್ಲಿ ನೀರಿನ ಸಮಸ್ಯೆ ಉಂಟಾಗಿ ನೀರಿಗಾಗಿ
ಪರಿತಪಿಸಿದ್ದು, ಬಹುತೇಕ ಮನೆಗಳಲ್ಲಿಯೂ ನೀರಿಲ್ಲದೆ
ಟ್ಯಾಂಕ್ ಮೂಲಕ ನೀರು ಒದಗಿಸುವ ಪರಿಸ್ಥಿತಿ
ಉಂಟಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ
ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗಿದೆ.

ಉಡುಪಿ ನಗರಕ್ಕೆ ನೀರುಣಿಸುವ ಸ್ವರ್ಣಾ ನದಿ ಬಜೆ ಡ್ಯಾಂನಲ್ಲಿ ನೀರಿನ ಮಟ್ಟ 14.40 ಮೀ ಇದೆ. ಹಿರಿಯಡಕ ಸರ್ಣಾ ನದಿ ಬಜೆ ಡ್ಯಾಮ್‌ನಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕಳೆದ ವರ್ಷ ಜೂನ್ ಮೊದಲ ವಾರ ಬಳಿಕ ಉತ್ತಮ ಮಳೆಯಾಗಿದ್ದು, ನದಿಗಳಲ್ಲಿ
ಹೊಸ ನೀರು ಹರಿವು ಆರಂಭಗೊಂಡಿದ್ದು ಜೂನ್ ತಿಂಗಳ ನಂತರವಾಗಿತ್ತು.ಈ ವರ್ಷ ಮೇ ತಿಂಗಳ
ಮಳೆಯಿಂದಾಗಿ ಅಂತ್ಯದಲ್ಲೇ ನದಿಗಳಿಗೆ ಜೀವಕಳೆ ಬಂದಿದೆ.

ಉದ್ಯಾವರ – ಪಾಪನಾಶಿನಿ, ಹಿರಿಯಡಕ
ಸರ್ಕಾ, ಹೆಬ್ರಿ ಸೀತಾ ನದಿಗಳಲ್ಲಿ ಹೊಸ ಹರಿವು
ಆರಂಭಗೊಂಡಿರುವುದರಿಂದ ಸಾರ್ವಜನಿಕರು,
ಕೃಷಿಕರು ನಿಟ್ಟುಸಿರು ಬಿಡುವಂತಾಗಿದೆ.

Latest Indian news

Popular Stories