5 ಬಂಡಾಯ ಅಭ್ಯರ್ಥಿಗಳು ಕಾಂಗ್ರೆಸ್‌ನಿಂದ ಉಚ್ಚಾಟನೆ

ಬೆಂಗಳೂರು:  ಶಿಕ್ಷಕರ ಮತ್ತು ಪದವೀಧರರ ತಲಾ ಮೂರು ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಐವರು ಬಂಡಾಯ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಗುರುವಾರ ಉಚ್ಚಾಟನೆಯ ಶಾಕ್‌ ನೀಡಿದೆ.

ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿ, ಕಾಂಗ್ರೆಸ್‌ನ ಶಿಸ್ಸನ್ನು ಉಲ್ಲಂ ಸಿದ ಆರೋಪದ ಹಿನ್ನೆಲೆಯಲ್ಲಿ ಐವರನ್ನು ಮುಂದಿನ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್‌ ಆದೇಶ ಹೊರಡಿಸಿದ್ದಾರೆ.

ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಕಣಕ್ಕಿಳಿದ ಶಿವಮೊಗ್ಗದ ಎಸ್‌.ಪಿ.ದಿನೇಶ್‌, ಬೆಂಗಳೂರು ಪದವೀಧರ ಕ್ಷೇತ್ರದ ಫ‌ರ್ಡಿನಾಂಡ್‌ ಲಾರೆನ್ಸ್‌, ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ ಚಿಕ್ಕಮಗಳೂರಿನ ಬಿ.ಆರ್‌.ನಂಜೇಶ್‌, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಚಿತ್ರದುರ್ಗದ ಲೋಕೇಶ್‌ ತಾಳಿಕಟ್ಟೆ ಮತ್ತು ಬ್ಯಾಟರಾಯನಪುರದ ವಿನೋದ್‌ ಶಿವರಾಜ್‌ ಉಚ್ಚಾಟನೆಗೊಂಡವರು.

Latest Indian news

Popular Stories