ಚುನಾವಣಾ ಪೂರ್ವದಲ್ಲಿ ಹಲವು ಸಮೀಕ್ಷೆಗಳು ಹೊರಗೆ ಬರುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷ ಮೇಲುಗೈ ಸಾಧಿಸಬಹುದೆಂಬ ಊಹೆ ಮಾಡಲಾಗುತ್ತದೆ. ಇದರಲ್ಲಿ ಅಂತರಿಕವಾಗಿ ಪಕ್ಷಗಳು ಸ್ವತಃ ನಡೆಸುವ ಸರ್ವೆಗಳು ಸ್ವಲ್ಪ ಮಟ್ಟಿಗೆ ಸಹಜತೆಯನ್ನು, ನೆಲದ ವಾಸ್ತವಿಕತೆಗೆ ಹತ್ತಿರವಾಗಿರುತ್ತದೆ.
ಬಿಜೆಪಿಯ ಮಾತೃ ಸಂಘಟನೆ RSS ಮಾಡಿದೆ ಎನ್ನಲಾದ ಅಂತರಿಕ ಸರ್ವೆಯ ಒಂದು ವರದಿ ವೈರಲಾಗುತ್ತಿದೆ. ಅದರ ಪ್ರತಿಯನ್ನು ಯೋಗೆಂದ್ರ ಯಾದವ್ ಅವರು ಹಂಚಿಕೊಂಡಿದ್ದಾರೆ. ಆದರೆ ಆ ವರದಿಯು ಆರ್.ಎಸ್.ಎಸ್ ನಡೆಸಿದ ವರದಿಯೇ ಎಂಬುವುದು ಧೃಡ ಪಟ್ಟಿಲ್ಲ. ಯೋಗೆಂದ್ರ ಯಾದವ್ ಅವರು ನನಗೆ ಚುನಾವಣಾ ಭವಿಷ್ಯಗಳ ಮೇಲೆ ಆಸಕ್ತಿಯಿಲ್ಲ. ಆದರೆ ಈ ಸಂಖ್ಯೆಯನ್ನು ವಾಸ್ತವಿಕವಾಗಿ ಬದಲಾಯಿಸಬೇಕೆಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆರ್.ಎಸ್.ಎಸ್ ಈ ಬಾರಿ ಅಂತರಿಕ ಸಮೀಕ್ಷೆ ನಡೆಸಿದ್ದು ಅದರಲ್ಲಿ ಬಿಜೆಪಿ ನಿರ್ವಹಣೆ ಸರಿಯಿಲ್ಲ ಎಂಬ ವರದಿ ನೀಡಿದೆ ಎಂಬ ಊಹಾಪೋಹಗಳ ನಡುವೆ ಈ ಅಂಕಿ-ಅಂಶಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.