ಆಲಿಬಾಬಾ ಮತ್ತು ನಲ್ವತ್ತು ಕಳ್ಳರ ಕತೆ ಕೇಳಿದ್ದೀರಿ: ಇದು ಢೋಂಗಿ ಬಾಬಾ ಮತ್ತು 38 ಕಳ್ಳರ ಗುಂಪು – ಆಪ್ ಕರ್ನಾಟಕ

ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ  ಈಗಾಗಲೇ ರಣಕಹಳೆ ಮೊಳಗಿದೆ. ಕಾಂಗ್ರೆಸ್, ಎಎಪಿ, ಟಿಎಂಸಿ, ಶಿವಸೇನೆ, ಜೆಡಿಯು, ಆರ್‌ಜೆಡಿ, ಎಸ್‌ಪಿ ಸೇರಿದಂತೆ ಮಿತ್ರಪಕ್ಷಗಳೆಲ್ಲ ಬೆಂಗಳೂರಲ್ಲಿ ಸಭೆ ಸೇರಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ  ಹಾಗೂ ಎನ್‌ಡಿಎ ಮೈತ್ರಿಕೂಟದ ವಿರುದ್ಧ ತೊಡೆತಟ್ಟಿವೆ.

ಮೈತ್ರಿಕೂಟದ ವಿರುದ್ಧ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ. ಇದು INDIA ಅಲ್ಲ, ಇಟಲಿಯ Eat INDIA ಕಂಪನಿ ಎಂದು ಬಿಜೆಪಿ ಟ್ವೀಟ್  ಮಾಡಿದೆ.  ವಿರೋಧ ಪಕ್ಷಗಳ INDIA ಮೈತ್ರಿಕೂಟಕ್ಕೆ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ, ಭಾರತ ಸಮೃದ್ಧವಾದಾಗಲೆಲ್ಲಾ INDIA ಹೆಸರಿನಲ್ಲಿ ಖದೀಮ ಕಂಪನಿಗಳು ಹುಟ್ಟಿಕೊಳ್ಳುತ್ತವೆ ಎಂದು ವ್ಯಂಗ್ಯವಾಡಿದೆ.

ಬಿಜೆಪಿಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಎಎಪಿ ಕರ್ನಾಟಕ ಆಲಿಬಾಬಾ ಮತ್ತು ನಲ್ವತ್ತು ಕಳ್ಳರ ಕತೆ ಕೇಳಿರಬಹುದು. ಇದು ಢೋಂಗಿ ಬಾಬಾ ಮತ್ತು 38 ಕಳ್ಳರ ಗುಂಪು!  ಈ ಗುಂಪು ಎಷ್ಟೋ ಜನ ತಮ್ಮ ಪಕ್ಷಕ್ಕೇ ಚೂರಿ ಹಾಕಿದವರು ಇದ್ದಾರೆ! ಇಡಿ – ಐಟಿ ಭಯದಿಂದ ಬಂದವರು ಇದ್ದಾರೆ!  ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟುಕೊಂಡೇ ಪಕ್ಷ ಮಾಡಿಕೊಂಡಿರುವ ತುಕುಡೆ-ತುಕುಡೆ ಗ್ಯಾಂಗಿನವರಿದ್ದಾರೆ !  ಎಲ್ಲಿ ಅಧಿಕಾರ ಇರುತ್ತೋ ಅಲ್ಲಿ ಹೋಗುವ ಬಹಳಷ್ಟು ಗಂಜಿ ಗಿರಾಕಿಗಳಿದ್ದಾರೆ!  ನಿನ್ನೆ ತನಕ ಕಳ್ಳರಾಗಿದ್ದವರು ಇಂದು ಮಳ್ಳರಾಗಿದ್ದಾರೆ ! ಎಷ್ಟೇ ದೊಡ್ಡ ಭ್ರಷ್ಟ ಇದ್ದರೂ, ಪಕ್ಷ ಸೇರಿದ ಕೂಡಲೇ ಕ್ಲೀನ್ ಮಾಡಿಕೊಡುವ BJP4India  ವಾಷಿಂಗ್ ಮಿಷನ್ ಪಕ್ಷ ಇದೆ.
Welcome to NDA
N : Narendra
D : Dummy of
A : Ambani & Adani
#INDIAvsNDA ಎಂದು ಎಎಪಿ ಟ್ವಿಟ್ಟರ್ ನಲ್ಲಿ  ತಪರಾಕಿ ಹಾಕಿದೆ.

Latest Indian news

Popular Stories