Featured StoryDakshina Kannada

ಮಂಗಳೂರಿನಲ್ಲೂ ಅಭರಣ ಮಳಿಗೆಗೆ ಐಟಿ ದಾಳಿ

ದಕ್ಷಿಣ ಕನ್ನಡ ಪ್ರತಿನಿಧಿ

ಮಂಗಳೂರು: ಮಂಗಳೂರು, ಉಡುಪಿ ಸಹಿತ ರಾಜ್ಯಾದ್ಯಂತ ಹಲವು ಶಾಖೆಗಳಿರುವ ಆಭರಣ ಜುವೆಲ್ಲರಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಎರಡು ಇನ್ನೋವಾ ಕಾರಿನಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು ಮಂಗಳೂರಿನ ಶಿವಭಾಗ್‌ನಲ್ಲಿರುವ ಶಾಖೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದಲ್ಲಿ ಮಂಗಳೂರು, ಉಡುಪಿ ಸಹಿತ 14 ಕಡೆಗಳಲ್ಲಿ ಆಭರಣ ಜುವೆಲ್ಲರಿ ಶಾಖೆಗಳನ್ನು ಹೊಂದಿದ್ದು, ಎಲ್ಲಾ ಕಡೆಗಳಲ್ಲೂ ಏಕ ಕಾಲದಲ್ಲಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button