ಟ್ಯೂಷನ್ ಮುಗಿಸಿ ಬರುತ್ತಿರುವಾಗ ಮಕ್ಕಳಿಗೆ ಪಿಕಪ್ ವಾಹನ ಡಿಕ್ಕಿ – ಇಬ್ಬರು ಪುಟಾಣಿಗಳು ಮೃತ್ಯು, ಮೂವರು ಆಸ್ಪತ್ರೆಗೆ ದಾಖಲು

ರಾಮನಗರ : ಪಿಕಪ್ ಚಾಲಕನೋರ್ವನ
ಬೇಜವಾಬ್ದಾರಿತನಕ್ಕೆ ಇಬ್ಬರು ಮಕ್ಕಳು ಮೃತಪಟ್ಟಿವೆ.

ಟ್ಯೂಷನ್ ಮುಗಿಸಿ ಮನೆ ಸೇರುವ ಹೊತ್ತಲ್ಲಿ ಪಿಕಪ್ ವಾಹನ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ರಾಮನಗರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಬಳಿ
ಟ್ಯೂಶನ್ ಮುಗಿಸಿ ಮನೆಗೆ ಹೊಗುತ್ತಿದ್ದಾಗ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಐವರು ಮಕ್ಕಳನ್ನ ರಾಮನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ರೋಹಿತ್ (5),ಶಾಲಿನಿ (8) ಮೃತಪಟ್ಟಿದ್ದಾರೆ. ಉಳಿದ ಸುಚಿತ್, ಗೌತಮಿ, ಲೇಖನಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಆಸ್ಪತ್ರೆಗೆ ಎಎಸ್ಪಿ ಸುರೇಶ್ ಭೇಟಿ, ಅಪಘಾತದ ಕುರಿತು
ಮಾಹಿತಿ ಸಂಗ್ರಹಿಸಿದ್ದಾರೆ. ಮಕ್ಕಳಿಗೆ ಗುದ್ದಿ ಎಸ್ಕೆಪ್
ಆಗಿದ್ದ ಗೂಡ್ಸ್ ವಾಹನ ಚಾಲಕ ತನ್ನ ವಾಹನವನ್ನ
ಬೇರೆಡೆ ನಿಲ್ಲಿಸಿ ಎಸ್ಕೆಪ್ ಆಗಿದ್ದಾನೆ. ಈ ಸಂಬಂಧ
ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories