ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿ ರಚಿಸಲು ಎಲ್ಲಾ ವಿಪಕ್ಷಗಳ ತಂತ್ರ: ಜುಲೈ 17-18ರಂದು ಸಭೆ

ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಎದುರಿಸಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್, ಸ್ಥಳೀಯ ಪಕ್ಷಗಳು ಸೇರಿದಂತೆ ವಿಪಕ್ಷಗಳು ಒಟ್ಟು ಸೇರಿ ತಂತ್ರ ಹೆಣೆಯಲು ಮುಂದಾಗಿದ್ದು ಅದರಂತೆ ಕಳೆದ ವಾರ ಬಿಹಾರದ ಪಾಟ್ನಾದಲ್ಲಿ ಸಭೆ ನಡೆಸಲಾಗಿತ್ತು. 

ಇದೀಗ ಎರಡನೇ ಸುತ್ತಿನ ಸಭೆಯನ್ನು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ನಡೆಸಲು ವಿಪಕ್ಷಗಳ ನಾಯಕರು ಮುಂದಾಗಿದ್ದು ಆರಂಭದಲ್ಲಿ ಜುಲೈ 13 ಮತ್ತು 14ರಂದು ಸಭೆ ದಿನಾಂಕಗಳು ನಿಗದಿಯಾಗಿದ್ದವು. ಆದರೆ ಅದನ್ನು ಮುಂದೂಡಿ ಇದೀಗ ಜುಲೈ 17 ಮತ್ತು 18ರಂದು ಬೆಂಗಳೂರಿನಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಫ್ಯಾಸಿಸ್ಟ್ ಮತ್ತು ಅಪ್ರಜಾಸತ್ತಾತ್ಮಕ ಶಕ್ತಿಗಳನ್ನು ಸೋಲಿಸಲು ಮತ್ತು ದೇಶವನ್ನು ಅಭಿವೃದ್ಧಿಯಲ್ಲಿ ಮುಂದಕ್ಕೆ ಕೊಂಡೊಯ್ಯಲು ನಮ್ಮ ಸಂಕಲ್ಪದಲ್ಲಿ ಅಚಲರಾಗಿದ್ದೇವೆ ಎಂದು ವೇಣುಗೋಪಾಲ್ ಬರೆದುಕೊಂಡಿದ್ದಾರೆ.

Latest Indian news

Popular Stories