ಅಮರನಾಥ ಗುಹೆ ಮಾರ್ಗದಲ್ಲಿ ಸಿಲುಕಿಕೊಂಡ 80 ಮಂದಿ ಕನ್ನಡಿಗರು: ಸುರಕ್ಷಿತವಾಗಿ ನಾಡಿಗೆ ತರಲು ಸರ್ಕಾರ ಬದ್ಧ – ಸಿ.ಎಮ್

ಶ್ರೀನಗರ: ಅಮರನಾಥ ಗುಹೆ ದರ್ಶನಕ್ಕೆ ಹೋಗಿದ್ದ ಯಾತ್ರಾರ್ಥಿಗಳ ಪೈಕಿ 80 ಮಂದಿ ಕನ್ನಡಿಗರು ಮಾರ್ಗ ಮಧ್ಯೆ ಸಿಲುಕಿಕೊಂಡಿದ್ದಾರೆ. 

ಪ್ರತಿಕೂಲ ವಾತಾವರಣದ ಪರಿಣಾಮ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದು 80 ಮಂದಿಯ ಪೈಕಿ 23 ಮಂದಿ ಗದಗ ಜಿಲ್ಲೆಯವರಾಗಿದ್ದಾರೆ. ಯಾತ್ರಾರ್ಥಿಗಳು ಪಂಚತಾರ್ಣಿಯ ಬಳಿ ಸಿಲುಕಿಕೊಂಡಿದ್ದು, ದೇವಾಲಯದಿಂದ ಇದು 6 ಕಿ.ಮೀ ದೂರದಲ್ಲಿರುವ ಪ್ರದೇಶವಾಗಿದೆ.

ಅಮರನಾಥ ಯಾತ್ರೆ: 2 ದಿನದಲ್ಲಿ 6 ಮಂದಿ ಯಾತ್ರಿಗಳ ಸಾವು, ಸಾವಿನ ಸಂಖ್ಯೆ 9ಕ್ಕೆ ಏರಿಕೆ

ರಾಜ್ಯದ ಯಾತ್ರಾರ್ಥಿಗಳು ಸುರಕ್ಷಿತವಾಗಿ ಮರಳಲು ಅಗತ್ಯವಿರುವ ಎಲ್ಲ ನೆರವು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Latest Indian news

Popular Stories