ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ರೂ. 600 ಕೋಟಿ ದೋಚಿದ ‘ಅನಿಮಲ್’

ರಣಬೀರ್ ಕಫೂರ್ ಅಭಿನಯದ ಬಾಲಿವುಡ್ ಚಿತ್ರ ‘ಅನಿಮಲ್’ ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ರೂ. 600.67 ಕೋಟಿ ಗಳಿಸಿದೆ ಎಂದು ನಿರ್ಮಾಪಕರು ಗುರುವಾರ ತಿಳಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರವು ಡಿಸೆಂಬರ್ 1 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿದೆ.

ಅನಿಮಲ್ ನ ಕಲೆಕ್ಷನ್ ವಿಚಾರವನ್ನು ಪ್ರೊಡಕ್ಷನ್ ಹೌಸ್ ಟಿ-ಸೀರೀಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಎಂಟು ದಿನಗಳ ವಿಶ್ವಾದ್ಯಂತ ಒಟ್ಟು ಕಲೆಕ್ಷನ್ 600.67 ಕೋಟಿ ರೂ. ಆಗಿದೆ. ಬ್ಲಾಕ್ ಬಸ್ಟರ್ ಚಿತ್ರದ ಗೆಲುವಿನ ಓಟ ಮುಂದುವರೆದಿದೆ ಎಂಬ ಶೀರ್ಷಿಕೆಯಡಿ ಫೋಸ್ಟ್ ಮಾಡಲಾಗಿದೆ.

ಅನಿಮಲ್ ಚಿತ್ರ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವಂತೆಯೇ, ವಿಮರ್ಶಕರು ಹಾಗೂ ವೀಕ್ಷಕರ ಒಂದು ವರ್ಗವು, ಸ್ತ್ರೀದ್ವೇಷಿ ಮತ್ತು ಗ್ರಾಫಿಕಲಿ ವೈಲೆಂಟ್ ಎಂದು ಟೀಕಿಸಿದ್ದಾರೆ. ಬಿಡುಗಡೆಗೂ ಮುನ್ನಸೆನ್ಸಾರ್ ಮಂಡಳಿಯಿಂದ ಎ ಸರ್ಟಿಫಿಕೇಟ್ ನೀಡಿದ ಪ್ಯಾನ್-ಇಂಡಿಯಾ ಚಲನಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ, ಟ್ರಿಪ್ಟಿ ಡಿಮ್ರಿ, ಸುರೇಶ್ ಒಬೆರಾಯ್ ಮತ್ತು ಪ್ರೇಮ್ ಚೋಪ್ರಾ ಅಭಿನಯಿಸಿದ್ದಾರೆ.

ಈ ಚಿತ್ರವನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದೆ.

Latest Indian news

Popular Stories