
Featured StoryUdupi
ಹೆಲಿಕಾಪ್ಟರ್’ನಲ್ಲಿ ಹಣದ ಆರೋಪ: ಸೊರಕೆ ಅಸಹಾಯಕತೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ – ಅಣ್ಣಾಮಲೈ
ಅಣ್ಣಾಮಲೈ ಹೆಲಿಕಾಫ್ಟರ್ ನಲ್ಲಿ ಹಣ ತಂದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ,ಸೊರಕೆ ಅವರು ಎಲ್ಲರೂ ಅವರ ಥರಾನೇ ಇದಾರೆ ಅಂದುಕೊಂಡಿರ್ಬೇಕು. ನಾವು ಪ್ರಾಮಾಣಿಕವಾಗಿ ಇದ್ದೇವೆ. ನಾವು ಯಾರ ಬಗೆಯು ತಪ್ಪು ಮಾತನಾಡಲ್ಲ. ಅಪಪ್ರಚಾರ ಮಾಡುವ ಕಾಂಗ್ರೆಸ್ ಬಾಯಿಗೆ ಬಂದಂತೆ ಮಾತನಾಡುತ್ತೆ ಎಂದಿದ್ದಾರೆ.
ಪ್ರತಿಸ್ಪರ್ಧಿಗೆ ಹೆದರಿ ಸೊರಕೆ ಈ ರೀತಿ ಮಾತನಾಡುತ್ತಿದ್ದಾರೆ. ಇದರಿಂದ ನಮ್ಮ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಗೆಲುವು ಖಚಿತ ಅನ್ನೋದು ಗೊತ್ತಾಗಿದೆ.ನಾನು ಹೆಲಿಕಾಪ್ಟರ್ ನಲ್ಲಿ ಬಂದಿದ್ದು ನಿಜ. ಉಡುಪಿಯಿಂದ ಇನ್ನೊಂದು ಕಡೆಗೆ ತುರ್ತಾಗಿ ಹೋಗಬೇಕು. ಒಟ್ಟು ಐದು ಕಾರ್ಯಕ್ರಮಗಳು ನಿಗದಿಯಾಗಿದೆ.ಸುಳ್ಯ, ತೀರ್ಥಹಳ್ಳಿ, ಚಿಕ್ಕಮಗಳೂರು, ಎಲ್ಲಾ ಕಡೆ ಓಡಾಟ ಇದೆ. ಸಮಯಕ್ಕೆ ಸರಿಯಾಗಿ ಎಲ್ಲಾ ಸ್ಥಳದಲ್ಲಿ ಹಾಜರಿರಬೇಕು ಎಂದಿದ್ದಾರೆ.
ಸೊರಕೆಯವರು ನನ್ನ ಒಳ್ಳೆ ಮಿತ್ರರು, ಅಸಹಾಯಕತೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.




