Featured StoryState News

ಅಪರಾಧಿ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದರೂ ಕಾನೂನನ್ನು ಕೈಗೆತ್ತಿಕೊಂಡು ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ; ಕೊಲೆ ಕೃತ್ಯದ ಆರೋಪಿಗಳನ್ನು ಶೀಘ್ರ ಬಂಧಿಸಲು APCR ಆಗ್ರಹ

ಮಂಗಳೂರಿನ ಬಜ್ಜೆಯಲ್ಲಿ ಸುಹಾಸ್ ಶೆಟ್ಟಿ ಎಂಬ ಯುವಕನನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಕೊಲೆಗೈದಿರುವುದು ಖಂಡನೀಯ. ಇತ್ತೀಚೆಗೆ ನಡೆದಿದ್ದ ಗುಂಪುದಾಳಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಹತ್ಯೆಯ ನಂತರದಲ್ಲಿ ಈಗ ಈ ಸುಹಾಸ್ ಶೆಟ್ಟಿಯ ಕೊಲೆ ನಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಸೂಚನೆಯಾಗಿದೆ.

ಯಾವುದೇ ವ್ಯಕ್ತಿಯಾಗಲಿ, ಅವನು ಯಾವುದೇ ಅಪರಾಧಿ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದರೂ ಸಹ ಕಾನೂನನ್ನು ಕೈಗೆತ್ತಿಕೊಂಡು, ಹಿಂಸಿಸುವ,ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ. ನಮ್ಮ ಸಂವಿಧಾನ ಅಂತಹ ಹಿಂಸೆಗೆ ಅವಕಾಶ ನೀಡುವುದಿಲ್ಲ. ಕಾನೂನು ವ್ಯವಸ್ಥೆ ಮೂಲಕವೇ ಯಾವುದೇ ಅಪರಾಧಿಗೆ ಶಿಕ್ಷೆಯಾಗಬೇಕು. ಆದರೆ ಇಲ್ಲಿ ಬಹಿರಂಗವಾಗಿ ಕಾನೂನನ್ನು ಗಾಳಿಗೆ ತೂರಿ ಕೊಲೆ ನಡೆಸುವುದು ಸಂವಿಧಾನದ ಆಶಯದ ವಿರುದ್ಧವಾಗಿದೆ. ಸರ್ಕಾರ ಈ ಕುರಿತು ತಕ್ಷಣ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಬೇಕಾಗಿ ಸೂಕ್ತ ಕ್ರಮಕೈಗೊಳ್ಳಬೇಕಾಗಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ( ಎಪಿಸಿಆರ್),ಕರ್ನಾಟಕ ರಾಜ್ಯ ಘಟಕ ಆಗ್ರಹಿಸುತ್ತದೆ. ಇದರಲ್ಲಿ ಯಾವುದೇ ರೀತಿಯ ವಿಳಂಬವಾದಲ್ಲಿ ಇದರ ದುಷ್ಟ್ರಯೋಜನ ಸಮಾಜಭಂಜಕ ಕಿಡಿಗೇಡಿಗಳು ಪಡೆಯುವ ಸಾಧ್ಯತೆ ಇದೆ. ನಡೆದಂತಹ ಕೊಲೆಯು ಕೇವಲ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೃತ್ಯವಾಗಿದ್ದು, ಇದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಕೋಮುಬಣ್ಣ ನೀಡುವ ಪ್ರಯತ್ನ ನಡೆಸುತ್ತಿರುವುದು ಈಗಿನ ಬೆಳವಣಿಗೆಗಳು ತೋರಿಸುತ್ತಿದೆ.

ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳು ಯಾರೇ ಇದ್ದರೂ ಅವರನ್ನು ಹೆಡೆಮುರಿ ಕಟ್ಟಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕಾಗಿದೆ, ಈ ಬಗ್ಗೆ ನಗರ ಪೊಲೀಸ್ ಯಾವುದೇ ಒತ್ತಡ, ಆಮಿಷಗಳಿಗೆ ಮಣಿಯದೆ ಕರ್ತವ್ಯ ನಿರ್ವಹಿಸಿ ಕೂಡಲೇ ಅಪರಾಧಿಕಗಳನ್ನು ಪತ್ತೆ ಹಚ್ಚಿ ನ್ಯಾಯ ಕೊಡಿಸಬೇಕಾಗಿ ಈ ಮೂಲಕ ಆಗ್ರಹಿಸುತ್ತೇವೆ.

ಇಂತಹ ಅಪರಾಧಗಳು ದಕ್ಷಿಣ ಕನ್ನಡದ ಗೌರವ ಘನತೆಗೆ ಮಾರಕವಾಗಿದ್ದು ಮುಂದಕ್ಕೆ ಇಂತಹ ಕ್ರತ್ಯಗಳು ನಡೆಯದ ಹಾಗೆ ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡಲು ಬೇಕಾದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕ್ರಮಕೈಗೊಳ್ಳಬೇಕಾಗಿ ಈ ಮೂಲಕ APCR ಒತ್ತಾಯಿಸುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button