Featured StoryState News

70 ವರ್ಷಗಳ ಹಿಂದೆ ಕಾಂಗ್ರೆಸ್ ಬಜರಂಗದಳವನ್ನು ನಿಷೇಧಿಸಿದ್ದರೆ ದೇಶ ಹಾಳಾಗುತ್ತಿರಲಿಲ್ಲ: ಮೌಲಾನಾ ಅರ್ಷದ್ ಮದನಿ

ಆಯೇಷಾ ಮಾಸ್ತೂರ್

ಬಜರಂಗದಳವನ್ನು ಕೋಮುವಾದಿ ಎಂದು ಕರೆದಿರುವ ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಸೈಯದ್ ಅರ್ಷದ್ ಮದನಿ, ಕರ್ನಾಟಕದಲ್ಲಿ ಭಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು, ಅವರು 70 ವರ್ಷಗಳ ಹಿಂದೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದರೆ ದೇಶ ಹಾಳಾಗುತ್ತಿರಲಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ನಿರ್ಧಾರದ ಬಗ್ಗೆ ಖೇದವಿದೆ. ಪಕ್ಷವು ಅದನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಮೂಲಕ ತಪ್ಪು ಮಾಡಿದೆ ಆದರೆ ಮೌಲಾನಾ ಅರ್ಷದ್ ಮದನಿ ಇದು ಹಿಂದಿನ ತಪ್ಪಿನ ತಿದ್ದುಪಡಿ ಎಂದು ಭಾವಿಸಿದ್ದಾರೆ.

”ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಮತೀಯ ಗುಂಪುಗಳಾದ ಭಜರಂಗದಳವನ್ನು ಮುಚ್ಚುವ ಬಗ್ಗೆ ಮಾತನಾಡಿದೆ. 70 ವರ್ಷಗಳ ಹಿಂದೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದರೆ ದೇಶ ಹಾಳಾಗುತ್ತಿರಲಿಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿ ತಪ್ಪು ಮಾಡಿದೆ ಎಂದ ಅವರು, ಅದರೆ ತಪ್ಪಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಎಂದರು.

ಮುಂಬೈನ ಆಜಾದ್ ಮೈದಾನದಲ್ಲಿ ಜಮೀಯತ್ ಉಲೇಮಾ-ಎ-ಹಿಂದ್ ಸಮಾವೇಶದಲ್ಲಿ ಮೌಲಾನಾ ಅರ್ಷದ್ ಮದನಿ ಮಾತನಾಡಿದರು. ಕಾಂಗ್ರೆಸ್‌ನಲ್ಲೂ ಕೆಲವು ಕೋಮುವಾದಿ ಶಕ್ತಿಗಳಿದ್ದು, ದೇಶಕ್ಕೆ ದೊಡ್ಡ ಹಾನಿ ಮಾಡಿದೆ ಎಂದು ಹೇಳಿದರು.

ಕರ್ನಾಟಕ ಚುನಾವಣೆಯಲ್ಲಿ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಚುನಾಯಿತವಾದರೆ ಬಜರಂಗದಳವನ್ನು ನಿಷೇಧಿಸುವ ಮಹತ್ವದ ಭರವಸೆಯನ್ನು ನೀಡಿತ್ತು.

ಮೂಲ: ಆಜ್ ತಕ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button