ಪ್ರಧಾನಿ ಮೋದಿ ಶೀಘ್ರದಲ್ಲೇ ‘ಬಂಡಾಯ’ ಎದುರಿಸಬೇಕಾಗುತ್ತದೆ- ಸಿಎಂ ಅಶೋಕ್ ಗೆಹ್ಲೋಟ್

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಪಕ್ಷದೊಳಗೆ ಗೌರವವನ್ನು ಕಳೆದುಕೊಳ್ಳುತ್ತಿದ್ದು, ಶೀಘ್ರದಲ್ಲೇ ‘ಬಂಡಾಯ’ ಎದುರಿಸಬೇಕಾಗುತ್ತದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಹೇಳಿದ್ದಾರೆ. ಮೋದಿಯವರ ನಡೆಯಿಂದ ಪಕ್ಷ ಅವರ ವಿರುದ್ಧ ತಿರುಗಿ ಬೀಳುವುದರಿಂದ ಸಾಮಾನ್ಯ ಜನರಲ್ಲಿ ಅವರ ಗೌರವವು ಕ್ಷೀಣಿಸುತ್ತಿದೆ ಎಂದಿದ್ದಾರೆ. 

 ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಗೆಹ್ಲೋಟ್, ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವುದು ಎಂದಿಗೂ ಆಗುವುದಿಲ್ಲ,”ಕಾಂಗ್ರೆಸ್ ದೇಶದ ಪ್ರತಿಯೊಂದು ಮನೆಯಲ್ಲೂ ಇದೆ, ಆದರೆ ಅವರ ಪಕ್ಷದ (ಬಿಜೆಪಿ) ಸ್ಥಿತಿ ಹದಗೆಡುತ್ತಿದೆ. ಬಿಜೆಪಿಯಲ್ಲಿ ಒಡಕಿದೆ. ಮೋದಿಜಿಗೆ  ಅವರ ಪಕ್ಷದೊಳಗೆ ಗೌರವ ಕಡಿಮೆಯಾಗುತ್ತಿದೆ, ಇದು ಸ್ವತಃ ಮೋದಿಯವರಿಗೆ ಆತಂಕದ ವಿಷಯವಾಗಿದೆ, ಅವರು ಸಾರ್ವಜನಿಕರಲ್ಲಿ ಮೊದಲು ಹೊಂದಿದ್ದ ಗೌರವವೂ ಕಡಿಮೆಯಾಗಿದೆ ಎಂದರು.

ಕಾಂಗ್ರೆಸ್‌ನ ಆಂತರಿಕ ವಿಷಯಗಳ ಬಗ್ಗೆ ಬಿಜೆಪಿಯವರು ಅನಗತ್ಯವಾಗಿ ಹೇಳಿಕೆ ನೀಡುತ್ತಿದ್ದಾರೆ. “ಮೊದಲು ಅವರ ಪಕ್ಷದ ಸಭೆಗಳಲ್ಲಿ ಏನಾಗುತ್ತಿತ್ತು ಮತ್ತು ಈಗ ಏನಾಗುತ್ತದೆ ಎಂದು ಬಿಜೆಪಿ ನಾಯಕರನ್ನೇ ಕೇಳಿ ಎಂದ ಅವರು,  ಪ್ರಧಾನಿ ಮೋದಿ ಅವರ ನಡೆ ವಿರುದ್ಧ ಪಕ್ಷ ತಿರುಗಿಬೀಳುತ್ತಿದ್ದು, ಶೀಘ್ರವೇ ಬಂಡಾಯ ಏಳಬಹುದು ಎಂದರು. 

ಮಣಿಪುರದ ಹಿಂಸಾಚಾರ ಪೀಡಿತ ರಾಜ್ಯದ ಪರಿಸ್ಥಿತಿಯ ಬಗ್ಗೆ ಮೋದಿ ಚಿಂತಿಸುತ್ತಿಲ್ಲ. ಸಂಸತ್ತಿನಲ್ಲಿ ತಮ್ಮ ಎರಡು ಗಂಟೆಗಳಿಗೂ ಹೆಚ್ಚು ಭಾಷಣದಲ್ಲಿ ಈ ವಿಷಯದ ಬಗ್ಗೆ ಕೇವಲ ಎರಡು ನಿಮಿಷಗಳ ಕಾಲ ಮಾತನಾಡಿದರು.”ದೇಶದ ಜನರು ದಡ್ಡರಲ್ಲ, ದೇಶದ ಜನರು ತುಂಬಾ ಬಲವಾದ ಸಾಮಾನ್ಯ ಜ್ಞಾನವನ್ನು ಹೊಂದಿದ್ದಾರೆ. ಅವರು ಎಲ್ಲವನ್ನೂ ಗಮನಿಸುತ್ತಿದ್ದು, ಎಂದಿಗೂ ಕ್ಷಮಿಸಲ್ಲ ಎಂದು ಗೆಹ್ಲೋಟ್ ಹೇಳಿದರು. 

Latest Indian news

Popular Stories