Featured StoryNational

ಬದ್ಲಾಪುರ ಲೈಂಗಿಕ ದೌರ್ಜನ್ಯ ‌ಪ್ರಕರಣ: ಕಾಂಗ್ರೆಸ್ ಅಥವಾ ಶಿವಸೇನೆಯವರಿಗೆ ಸಂಬಂಧಿಸಿದ ಸಂಸ್ಥೆಯಾಗಿದ್ದರೆ ದೇವೇಂದ್ರ ಫಡ್ನವಿಸ್ ಇಡೀ‌ ಮಹಿಳಾ ಮಂಡಳಿಯನ್ನು ತೆಗೆದುಕೊಂಡು ಹೋಗಿ ನಾಟಕವಾಡುತ್ತಿದ್ದರು – ಸಂಜಯ್ ರಾವತ್ ವಾಗ್ದಾಳಿ

ಬದ್ಲಾಪುರದಲ್ಲಿ ಹೆಣ್ಣು ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಕುರಿತು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಮಹಾರಾಷ್ಟ್ರದಲ್ಲಿ ಇನ್ನೇನು ಆಗಬಹುದು? ಅತ್ಯಾಚಾರದ ವಿರುದ್ಧ ಸಾರ್ವಜನಿಕ ತೀವ್ರ ಆಕ್ರೋಶವಿದೆ. ಎಂತಹ ಘೋರ ಅಪರಾಧ ಎಂದು ಅರ್ಥಮಾಡಿಕೊಳ್ಳದ ಸಣ್ಣ ಮಕ್ಕಳು. ಆ ಮಕ್ಕಳಿಗೆ ರಕ್ಷಣೆ ನೀಡುವ ಬದಲು, ನ್ಯಾಯಕ್ಕಾಗಿ ಬೀದಿಗಿಳಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೀರಿ, ಇದು ಯಾರ ಸಂಸ್ಥೆಯಲ್ಲಿ ಸಂಭವಿಸಿತು? ಎಂದು ಪ್ರಶ್ನಿಸಿದ್ದಾರೆ.

ಒಂದು ವೇಳೆ ಕಾಂಗ್ರೆಸ್ ಅಥವಾ ಶಿವಸೇನೆಯವರಿಗೆ ಸಂಬಂಧಿಸಿದ ಸಂಸ್ಥೆಯಾಗಿದ್ದರೆ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ಅವರ ಇಡೀ‌ ಮಹಿಳಾ ಮಂಡಳಿಯನ್ನು ತೆಗೆದುಕೊಂಡು ಹೋಗಿ 24 ಗಂಟೆ ಧರಣಿ ಕುಳಿತುಕೊಳ್ಳುತ್ತಿದ್ದರು.ದೊಡ್ಡ ತಮಾಶೆ ಸೃಷ್ಟಿಸುತ್ತಿದ್ದರು. ಈಗ ಎಲ್ಲಿದ್ದಾರೆ? ಈ ಸಂಸ್ಥೆ ಯಾರದೆಂದು ಪತ್ತೆ ಹಚ್ಚಿ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಪೊಲೀಸರು ಕೃತ್ಯದ ಪ್ರಕರಣ ದಾಖಲಿಸಲು ವಿಫಲರಾದಗ ಜನರು ಬೀದಿಗಿಳಿದಿದ್ದಾರೆ. ಪೊಲೀಸರ ಮೇಲೆ ಒತ್ತಡವಿತ್ತು. ಯಾರ ಒತ್ತಡವಿತ್ತು ಎಂಬುವುದನ್ನು ತಿಳಿಸಬಹುದೇ? ಎಂದು ಆಕ್ರೋಶ ಹೊರ ಹಾಕಿದರು. ಅಪರಾಧ ಕೃತ್ಯ ನಡೆದಾಗ ಉತ್ತರ ಪ್ರದೇಶದಲ್ಲಿ ಬುಲ್ಡೋಝರ್ ಚಲಿಸುತ್ತದೆ. ಇಲ್ಲಿಯೂ ಆ ಪ್ರಯತ್ನವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ನಿಮ್ಮ ಬುಲ್ಡೋಝರ್ ಯಾಕೆ ಅಲ್ಲಿ ಹೋಗಿಲ್ಲ ಎಂದು ಮುಖ್ಯಮಂತ್ರಿ ಶಿಂಧೆ ವಿರುದ್ಧ ಕಿಡಿಕಾರಿದರು.

Video:

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button