Featured StoryNational

ಬಂಗಾಳದ ಬಿಜೆಪಿ ಮುಖಂಡನಿಗೆ ಪಕ್ಷದ ಜವಾಬ್ದಾರಿಯಿಂದ ಕೊಕ್ – ಆತನ ಒಂದು ಹೇಳಿಕೆ ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಿತ್ತು!

ಬಂಗಾಳದ ಬಿಜೆಪಿ ಮುಖಂಡ, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಬೋಲಾಪುರ ಸಂಸದ ಅನುಪಮ್ ಹಝ್ರಾರನ್ನು ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಲಾಗಿದೆ.

2014 ರಲ್ಲಿ ತೃಣಮೂಲ ಕಾಂಗ್ರೆಸ್ ನಿಂದ ಗೆದ್ದಿದ್ದ ಹಝ್ರಾ ನಂತರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನಂತರ ಪಕ್ಷದಲ್ಲಿ ಅವರಿಗೆ ಉನ್ನತ ಜವಾಬ್ದಾರಿ ನೀಡಲಾಗಿತ್ತು. ಅವರು ಪರಿಶಿಷ್ಟ ಜಾತಿಯ ಪ್ರಮುಖ ಮುಖಂಡರಾಗಿ ಗುರುತಿಸಿಕೊಂಡಿದ್ದರು‌.

ಕಳೆದ ಬಾರಿ ನೀಡಿದ ಹೇಳಿಕೆ ಬಿಜೆಪಿಯನ್ನು ಮುಜುಗರಕ್ಕೆ ತಾಳಿತ್ತು. ಸಿಬಿಐ ಅಥವಾ ಇಡಿಯ ಸಮನ್ಸ್ ನಿರೀಕ್ಷೆಯಲ್ಲಿರುವ ತೃಣಮೂಲ ಕಾಂಗ್ರೆಸ್ ಭ್ರಷ್ಟ ಮುಖಂಡರು ತನ್ನನ್ನು ಸಂಪರ್ಕಿಸಬಹುದು. ಪಕ್ಷಕ್ಕೆ ತಮ್ಮ ಸೇವೆ ಸಲ್ಲುವಂತೆ ಮಾಡುತ್ತೇವೆ ಎಂದು ಹೇಳಿ ತಲ್ಲಣ ಉಂಟು ಮಾಡಿದ್ದರು.

ಇದರಿಂದಾಗಿ ಬಿಜೆಪಿಯ ಮೇಲಿನ ವಾಶಿಂಗ್ ಮೆಶಿನ್ ಆರೋಪಕ್ಕೆ ಮತ್ತಷ್ಟು ಬಲ ಬಂದು ಬಿಜೆಪಿ ತೀವ್ರ ಮುಜುಗರ ಅನುಭವಿಸಿತ್ತು‌.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button