ಕೋರ್ಟ್ ಕಲಾಪ ಮುಂದೂಡಿ | ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರತಿಭಟನೆ

ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸುವಂತೆ ಮುಖ್ಯಮಂತ್ರಿಗೆ ಮನವಿ

ಬೀದರ್ : ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸುವಂತೆ ಆಗ್ರಹಿಸಿ ಬೀದರ್ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿದ್ದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಳಿಕ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.

ಕಳೆದ ಕೆಲ ದಿನಗಳ ಹಿಂದೆ ಭಾಲ್ಕಿಯ ವಕೀಲರಾದ ಧನಲಕ್ಷ್ಮಿ ಯವರ ಮೇಲೆ ಪೊಲೀಸರ ದೌರ್ಜನ್ಯ ಹಾಗೂ ನಿನ್ನೆ ಕಲಬುರಗಿ ವಕೀಲರಾದ ಈರಣ್ಣ ಗೌಡ ಪೊಲೀಸ್ ಪಾಟೀಲ ಹತ್ಯೆಯನ್ನು ಖಂಡಿಸಿ ಧಿಕ್ಕಾರ ಕೂಗಿದ್ದರು

ರಾಜ್ಯದಲ್ಲಿ ದಿನೇ ದಿನೇ ವಕೀಲರ ಮೇಲೆ ಹಲ್ಲೆಗಳು ಹೆಚ್ಚುತ್ತಿದ್ದು ವಕೀಲರು ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ವಾತಾವರಣ ಎದುರಾಗುತ್ತಿದೆ,
ಹಾಗಾಗಿ ಕೂಡಲೇ ವಕೀಲರ ರಕ್ಷಣಾ ಕಾಯದೆ ಜಾರಿಗೊಳಿಸಿಸಬೇಕೆಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಕುಮಾರ ಎಸ್ ಪಾಟೀಲ್ ಆಗ್ರಹಿಸಿದ್ದರು.

ವರದಿ : ಹಣಮಂತ ದೇಶಮುಖ
ಜಿಲ್ಲಾ ವರದಿಗಾರರು
THG ಬೀದರ್

Latest Indian news

Popular Stories