ಪಾಟ್ನಾ: ತಮ್ಮ ಜನ್ ಸೂರಜ್ ಪಕ್ಷ ಅಧಿಕಾರಕ್ಕೆ ಬಂದ ಒಂದೇ ಗಂಟೆಯಲ್ಲಿ ‘ಮದ್ಯ ನಿಷೇಧ’ ನೀತಿಯನ್ನು ಅಂತ್ಯಗೊಳಿಸುವುದಾಗಿ ಪಕ್ಷದ ಅಧ್ಯಕ್ಷ ಪ್ರಶಾಂತ್ ಕಿಶೋರ್ ಘೋಷಿಸಿದ್ದಾರೆ.
ಮುಂಬರುವ ಅಕ್ಟೋಬರ್ ನಲ್ಲಿ ತಮ್ಮ ಜನ್ ಸೂರಜ್ ಪಕ್ಷಕ್ಕೆ ಅಧಿಕೃತವಾಗಿ ಚಾಲನೆ ನೀಡಲಿರುವ ಪ್ರಶಾಂತ್ ಕಿಶೋರ್ ಇದಕ್ಕೂ ಮೊದಲೇ ರಾಜ್ಯದಲ್ಲಿರುವ ಮದ್ಯ ನಿಷೇಧವನ್ನು ತೆರವುಗೊಳಿಸುವುದಾಗಿ ಘೋಷಣೆ ಮಾಡಿದ್ದು, ಪ್ರಶಾಂತ್ ಕಿಶೋರ್ ಅವರ ಈ ಘೋಷಣೆ ಇದೀಗ ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಪ್ರಶಾಂತ್ ಕಿಶೋರ್ ಅಕ್ಟೋಬರ್ 2 ರಂದು ಪಾಟ್ನಾದಲ್ಲಿ ಜಾನ್ ಸೂರಜ್ ಅವರ ಪಕ್ಷಕ್ಕೆ ಚಾಲನೆ ನೀಡಲಿದ್ದೇವೆ. ಇದಕ್ಕಾಗಿ ಪ್ರತ್ಯೇಕ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿಲ್ಲ. ಕಳೆದ ಎರಡು ವರ್ಷಗಳಿಂದ ತಯಾರಿ ನಡೆಸುತ್ತಿದ್ದೇವೆ. ಜನ್ ಸೂರಜ್ ಸರ್ಕಾರ ರಚನೆಯಾದರೆ ಒಂದು ಗಂಟೆಯೊಳಗೆ ಮದ್ಯ ನಿಷೇಧವನ್ನು ಕೊನೆಗೊಳಿಸುತ್ತೇವೆ ಎಂದು ಘೋಷಿಸಿದ್ದಾರೆ.
ಅಂತೆಯೇ ಇದೇ ವೇಳೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕುರಿತು ವ್ಯಂಗ್ಯ ಮಾಡಿರುವ ಪ್ರಶಾಂತ್ ಕಿಶೋರ್, ‘ಅವರು ಮನೆಯಿಂದ ಹೊರಗೆ ಬರಲಿ ಎಂದು ನಾನು ಅವರಿಗೆ ಶುಭ ಹಾರೈಸುತ್ತೇನೆ’ ಎಂದು ಹೇಳಿದರು.
ಏಪ್ರಿಲ್ 1, 2016 ರಲ್ಲಿ ಬಿಹಾರದಲ್ಲಿ ಮದ್ಯಪಾನ ನಿಷೇಧ ಜಾರಿಯಾಗಿತ್ತು. ಖ್ಯಾತ ಸಾಮಾಜಿಕ ಹೋರಾಟಗಾರ ಜೈಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಮದ್ಯಪಾನ ನಿಷೇಧ ಹೋರಾಟ ಭಾರಿ ಸುದ್ದಿಯಾಗಿತ್ತು. ಸಮಾಜ ಸೇವಕ ಮತ್ತು ಖ್ಯಾತ ಗಾಂಧಿವಾದಿ ಮತ್ತು ಪರಿಸರವಾದಿ ಮನೋಹರ್ ಮಾನವ್ ಈ ಹೋರಾಟಕ್ಕೆ ಸಾಥ್ ನೀಡಿದ್ದರು.
ಬಿಹಾರದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳೆಯರು, ಯುವಕರು ಮತ್ತು ಹಿರಿಯರಿಗೆ ಮದ್ಯವನ್ನು ನಿಲ್ಲಿಸುವ ಬಗ್ಗೆ ಜಾಗೃತಿ ಮೂಡಿಸಿದರು. ಬಳಿಕ ಎಚ್ಚೆತ್ತುಕೊಂಡಿದ್ದ ಅಂದಿನ ಸರ್ಕಾರ ಮದ್ಯಪಾನ ನಿಷೇಧ ಜಾರಿಗೆ ತಂದಿತ್ತು.