ಸಂವಿಧಾನ ವಿರೋಧಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಅನಂತ ಕುಮಾರ್ ಹೆಗಡೆಯನ್ನು ಹೊರ ಹಾಕಿದ ಬಿಜೆಪಿ ಹೈಕಮಾಂಡ್ – ವಿಶ್ಲೇಷಣೆ

ವಿಶ್ಲೇಷಣೆ: ಉತ್ತರ ಕನ್ನಡ ಪ್ರತಿನಿಧಿ

ಕಾರವಾರ: ಸಂವಿಧಾನ ಬದಲಿಸಬೇಕಾದರೆ 400 ಗೆಲ್ಲಿಸಿ ಎಂದು ಹೇಳಿದ್ದ ತನ್ನ ಸಂಸದನನ್ನು ಬಿಜೆಪಿ ಅತ್ಯಂತ ನಾಜೂಕಾಗಿ ಬೋನಿಗೆ ತಳ್ಳಿದೆ. ಭಟ್ಕಳದ ಮಹಾ ಶಕ್ತಿ ಕೇಂದ್ರದಲ್ಲಿ ಪಕ್ಷದ ಹಿರಿಯರು ಹಾಗೂ ಕಟ್ಟಾ ಕಾರ್ಯಕರ್ತರ ಎದುರು ಖುರ್ಚಿ ಇಟ್ಟು ” ನನ್ನ ಎದುರು ಯಾರು ಈ ಖುರ್ಚಿಯಲ್ಲಿ ಕುಳಿತುಕೊಳ್ಳುವಿರಿ” ಯಾರಿಗೆ ಆ ಧೈರ್ಯಯಿದೆ. ಬನ್ನಿ ತಾಕತ್ತು ಇದ್ರೆ ಕುಳಿತುಕೊಳ್ಳಿ ” ಎಂದು ಸಾವಲು ಎಸೆದಿದ್ದ ಬೆಂಕಿಯನ್ನು ಬಿಜೆಪಿ ಟಿಕೆಟ್ ತಪ್ಪಿಸುವ ಮೂಲಕ ಮೂಲೆ‌ಗುಂಪು ಮಾಡಿದೆ‌ .

ಹಾರ್ಡ ಕೋರ್ ರಾಜಕಾರಣ ದಿಂದ ಕರ್ನಾಟಕದಲ್ಲಿ ಬಿಜೆಪಿಗೆ ನಷ್ಟ ಎಂದು ಸ್ಪಷ್ಟವಾಗಿ ಅರಿತ ಬಿಜೆಪಿ ರಾಜು ಗೌಡ ರಿಂದ, ವಿಪಕ್ಷ ನಾಯಕ ಅಶೋಕ ಅವರಿಂದ ಸಂವಿಧಾನ ಪರ ಹೇಳಿಕೆ ಕೊಡಿಸಿ , ತನಗಾದ ನಷ್ಟವನ್ನು ಅಲ್ಪಮಟ್ಟಿಗೆ ಕಡಿಮೆ ಮಾಡಿಕೊಂಡಿತು. ಅಲ್ಲದೇ ಪಕ್ಷಕ್ಕೆ ಅನಂತ ಕುಮಾರ್ ಹೆಗಡೆಯ ಸಂವಿಧಾನ ವಿರೋಧಿ ಹೇಳಿಕೆಯಿಂದಾದ ಡ್ಯಾಮೇಜ್ ಕಂಟ್ರೋಲ್ ‌ಮಾಡಲು ದಾರಿ ಹುಡುಕಿ, ತೀವ್ರವಾದಿ ಹಿಂದುತ್ವವಾದಿಗಳನ್ನು ರಾಜಕೀಯ ದಿಂದಲೇ ದೂರ ಇಟ್ಟಿತು‌ . ಈಶ್ವರಪ್ಪ, ಪ್ರತಾಪ್ ಸಿಂಹ ಸಾಲಿಗೆ ಅನಂತ ಕುಮಾರ್ ಹೆಗಡೆ ಎಂಬ ಬೆಂಕಿ ನಾಲಿಗೆಯನ್ನು ದೂರ ಇಟ್ಟಿತು‌ .

ದಲಿತರ ,‌ಹಿಂದುಳಿದ ವರ್ಗಗಳ ಮತಗಳು ಪೂರ್ಣ ಸೋರಿ ಹೋಗುವುದನ್ನು ತಡೆಯಲು ರಮೇಶ್ ಜಿಗಜಿಣಗಿಗೆ ಟಿಕೆಟ್ ಕೊಟ್ಟು, ಕೋಲಾರದಲ್ಲಿ ಮುನಿಸ್ವಾಮಿಗೆ ಸಹ ಬೇಲಿ ಹಾಕಲಾಯಿತು ‌ . (ಕೋಲಾರ ಈಗ ಜೆಡಿಎಸ್ ಪಕ್ಷಕ್ಕೆ ದಾನ ನೀಡಲಾಗಿದೆ). ರಾಜ್ಯದಲ್ಲಿ ಜನರಿಂದ ಪೂರ್ಣ ದೂರ ಇರುವುದು, ಅಭಿವೃದ್ಧಿ ಕೆಲಸಗಳಿಗೆ ಬೆನ್ನು ಹಾಕುವುದು, ಸ್ವಂತ ವ್ಯಾಪಾರ ವೃದ್ಧಿಸಿಕೊಳ್ಳುವ ಸಂಸದರನ್ನು ಬಿಜೆಪಿ ಚಾಣಾಕ್ಷತನದಿಂದ ತುಳಿದು ಹಾಕಿದೆ. ಅದರಲ್ಲಿ ವಿಶೇಷವಾಗಿ ಸಂಘದ ಮಾತು ಕೇಳಿ ಮೋದಿಗೆ ಟಾಂಗ್ ಕೊಡಲು ಹೋದವರ ಬಾಲ ಕಟ್‌ ಮಾಡುವ ಕೆಲಸ ಬಿಜೆಪಿ ಸ್ಕ್ರೀನ್ ಕಮಿಟಿ‌ ಮಾಡಿದೆ.
ಸಂಸದ ಅನಂತ ಕುಮಾರ್ ಆರು ಸಲ ಗೆದ್ದ ದುರಹಂಕಾರ ಎಷ್ಟಿತ್ತು ಎಂದರೆ 2023 ರಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಒಂದು ಗಂಟೆ ಸಹ ಪ್ರಚಾರಕ್ಕೆ ಬಾರದೆ , ತನ್ನದೇ ಪಕ್ಷದ ಅಭ್ಯರ್ಥಿ ಗಳಿಗರ ಚೆಳ್ಳೆ ಹಣ್ಣು ತಿನ್ನಿಸಿದ್ದರು. ಶಾಸಕ ಹೆಬ್ಬಾರ್, ಶಾಸಕ ದಿನಕರ ಶೆಟ್ಟಿ ಸ್ವಂತ ಬಲದಿಂದ ಗೆದ್ದರು. ಆದರೆ ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ , ಕಾರವಾರದ ರೂಪಾಲಿ ನಾಯ್ಕ, ಭಟ್ಕಳದ ಸುನೀಲ್ ನಾಯ್ಕ, ಹಳಿಯಾಳದಲ್ಲಿ ಸುನೀಲ್‌ ಹೆಗಡೆ , ಕಿತ್ತೂರು ಬಿಜೆಪಿ ಶಾಸಕ ಸೋಲಲು ಕಾರಣ ವಾಗಿದ್ದರು. ಪ್ರಧಾನಿ ಮೋದಿ ಕಾರವಾರದಲ್ಲಿ ಅಭ್ಯರ್ಥಿ ಗಳ ಪರ ಪ್ರಚಾರಕ್ಕೆ ಬಂದಾಗ, ಬಿಜೆಪಿ ಸಂಸದ ಸಿಂಗಾಪುರ್ ಪ್ರವಾಸದಲ್ಲಿದ್ದರು. ಇದನ್ನು ಸ್ವತಃ ಅಂದಿನ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ್ ಕಾರವಾರ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು.
ರಾಜಕೀಯ ವಿದಾಯ ಹೇಳಿದ್ದ ಅನಂತಕುಮಾರ್ ನನ್ನು ಸಂಘಪರಿವಾರ ಮತ್ತೆ ಕರೆತಂದು ಉಗ್ರ ಹೇಳಿಕೆ ನೀಡಿಸಿ, ಒಂದು ಪ್ರಯೋಗ ಮಾಡಿತು. ಈ ಪ್ರಯೋಗವನ್ನು ವಿಪಕ್ಷ ನಾಯಕ ಅಶೋಕ ವಿರೋಧಿಸಿದಾಗ , ಅನಂತ ಹೆಗಡೆಗೆ ದೆಹಲಿ ರಾಜಕೀಯ ದಿಂದ ಗೆಟ್ ಪಾಸ್ ನೀಡುವುದು ಖಚಿತವಾಗಿತ್ತು.

ಈಗ ಅನಂತ ಕುಮಾರ್ ವಿರುದ್ಧ ಕಾಗೇರಿಯನ್ನು ತಂದಿಟ್ಟ ಬಿಜೆಪಿ ಮತ್ತೊಂದು ಪ್ರಯೋಗಕ್ಕೆ ಕೈಹಾಕಿದೆ. ಎದುರಾಳಿಯಾಗಿ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ , ಎಂಬಿಬಿಎಸ್ ಪದವೀಧರೆ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರರನ್ನು ಕಣಕ್ಕೆ ಇಳಿಸಿದೆ. ಈ ಮೂಲಕ ಖಾನಾಪುರ ಭಾಗಕ್ಕೆ ಹಾಗೂ ‌ಮರಾಠ ಸಮುದಾಯಕ್ಕೆ ಪ್ರಾಧಾನ್ಯತೆ ನೀಡುವ ದಾಳ ಬಳಸಿದೆ.

Latest Indian news

Popular Stories