ಕೆಟ್ಟ ಬಟ್ಟೆ ಧರಿಸಿ ಶೂರ್ಪನಖಿಯಂತೆ ಕಾಣ್ತೀರಾ: ದೇವರು ಸುಂದರ ದೇಹಕೊಟ್ಟಿದ್ದಾನೆ ಒಳ್ಳೆ ಬಟ್ಟೆ ಧರಿಸಿ: ಬಿಜೆಪಿ ಮುಖಂಡ

ಇಂದೋರ್: ‘ಕೆಟ್ಟ ಉಡುಗೆ’ ತೊಟ್ಟ ಹುಡುಗಿಯರು ರಾಮಾಯಣದ ‘ಶೂರ್ಪನಖಿ’ಯಂತೆ ಕಾಣುತ್ತಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ.

ಹನುಮ ಮತ್ತು ಮಹಾವೀರ ಜಯಂತಿಯಂದು ಇಲ್ಲಿ ಆಯೋಜಿಸಲಾದ ಧಾರ್ಮಿಕ ಸಮಾರಂಭದಲ್ಲಿ ಅವರು ನೀಡಿದ ಹೇಳಿಕೆ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

‘ನಾನು ರಾತ್ರಿ ಮನೆಗೆ ಹೋಗುವಾಗ ವಿದ್ಯಾವಂತ ಯುವಕರು ಮತ್ತು ಮಕ್ಕಳನ್ನು ಮಾದಕ ದ್ರವ್ಯದ ಅಮಲಿನಲ್ಲಿ ನೋಡುತ್ತೇನೆ. ಕಾರಿನಿಂದ ಕೆಳಗೆ ಇಳಿದು ಅವರಿಗೆ ಕಪಾಳಮೋಕ್ಷ ಮಾಡಬೇಕೆನಿಸುತ್ತದೆ ಎಂದು ಬಿಜೆಪಿ ನಾಯಕ ಹೇಳಿದರು.

‘ನಾವು ಮಹಿಳೆಯರಲ್ಲಿ ದೇವಿಯನ್ನು ಕಾಣುತ್ತೇವೆ. ಆದರೆ ಹುಡುಗಿಯರು ಕೆಟ್ಟ ಉಡುಪು ಧರಿಸಿ ತಿರುಗಾಡುವುದನ್ನು ನೋಡಿದರೆ ಅವರು ದೇವಿಯಂತೆ ಕಾಣುವುದಿಲ್ಲ ಆದರೆ ಶೂರ್ಪನಖಿಯಂತೆ ಕಾಣುತ್ತಾರೆ. ದೇವರು ನಿಮಗೆ ಒಳ್ಳೆಯ ಮತ್ತು ಸುಂದರವಾದ ದೇಹವನ್ನು ಕೊಟ್ಟಿದ್ದಾನೆ. ಅದನ್ನು ಒಳ್ಳೆಯ ಉಡುಪುಗಳನ್ನು ಧರಿಸಿ ಎಂದು ಅವರು ಹೇಳಿದರು.

Latest Indian news

Popular Stories