ಮೂರು ರಾಜ್ಯ ಗೆದ್ದು ಬೀಗಿದ ಬಿಜೆಪಿ | ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ

ಇಂದು ನಡೆದ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಬಹುತೇಕ ಹೊರ ಬಿದ್ದಿದ್ದು ಬಿಜೆಪಿ ನೂರು ರಾಜ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಅಚ್ಚರಿಯ ರೀತಿಯಲ್ಲಿ ಗೆದ್ದು ಬೀಗಿದೆ.

ಕಾಂಗ್ರೆಸ್ ಈ ಮುಂಚೆ ತನ್ನ ಸರಕಾರ ಇದ್ದ ಛತ್ತೀಸ್ಗಢ, ರಾಜಸ್ತಾನವನ್ನು ಕಳೆದುಕೊಂಡರೆ ತೆಲಂಗಾಣದಲ್ಲಿ ಜಯ ಸಾಧಿಸಿ ಸಮಾಧಾನ ಪಟ್ಟು ಕೊಟ್ಟಿದೆ.

ರಾಜಸ್ತಾನದಲ್ಲಿ ಬಿಜೆಪಿ 111, ಕಾಂಗ್ರೆಸ್ 73 ಸ್ಥಾನ ದಲ್ಲಿ ಮುನ್ನಡೆ ಸಾಧಿಸಿದ್ದು ಗೆಲುವಿನ ಅಂತರ ಇನ್ನಷ್ಟೇ ಧೃಡ ಪಡಬೇಕಾಗಿದೆ. ಮಧ್ಯ ಪ್ರದೇಶದಲ್ಲಿ ಭರ್ಜರಿ 161 ಸ್ಥಾನದಲ್ಲಿ ಬಹುತೇಕ ಬಿಜೆಪಿ ಗೆದ್ದರೆ 66 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದು ಕೆಲವೇ ಕ್ಷಣದಲ್ಲಿ ಬಿಜೆಪಿಯ ಗೆಲುವಿನ ಅಂತರ ಧೃಡ ಪಡಲಿದೆ.

ಕಾಂಗ್ರೆಸ್ ಬಹುತೇಕ ಗೆಲುವಿನ ನಿರೀಕ್ಷೆಯಲ್ಲಿದ್ದ ಛತ್ತೀಸ್ಗಢದಲ್ಲಿ ಭಾರೀ ನಿರಾಸೆ ಎದುರಿಸಿದ್ದು ಬಿಜೆಪಿ 53 ಕಾಂಗ್ರೆಸ್ 34 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದು ಬಿಜೆಪಿಯ ಗೆಲುವಿನ ಅಂತರ ಕೆಲವೇ ಗಂಟೆಯಲ್ಲಿ ಧೃಡ ಪಡಲಿದೆ.

ಇನ್ನುಳಿದಂತೆ ಬಿ.ಆರ್.ಎಸ್ ಪಕ್ಷದ ಆಡಳಿತ ಇದ್ದ ತೆಲಂಗಾಣವನ್ನು ಕಾಂಗ್ರೆಸ್ ದೊಡ್ಡ ಅಂತರದಲ್ಲಿ ಗೆದ್ದುಕೊಂಡಿದೆ‌. ಕಾಂಗ್ರೆಸ್ 66 , ಬಿ.ಆರ್.ಎಸ್ 39 ಸ್ಥಾನ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಗೆಲುವಿನ ಅಂತರ ಕೂಡ ಕೆಲವೇ ಗಂಟೆಯಲ್ಲಿ ನಿರ್ಧಾರವಾಗಲಿದೆ.

ಒಟ್ಟಿನಲ್ಲಿ ಲೋಕಸಭೆಯ ಮುನ್ನ ಸೆಮಿಫೈನಲ್ಸ್ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ನಾಳೆ ಮೀಝೋರಾಮ್ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.

Latest Indian news

Popular Stories