ಬ್ರಾಹ್ಮಣರೆಂದರೆ ಬಿಜೆಪಿ, ಕೋಮುವಾದಿಗಳಲ್ಲ: ಮಂಗಳೂರಿನಲ್ಲಿ ಸಮಾನ‌ ಮನಸ್ಕ‌ ಬ್ರಾಹ್ಮಣರ ಸಭೆ

ಮಂಗಳೂರು: ಬ್ರಾಹ್ಮಣರೆಂದರೆ ಕೇವಲ ಬಿಜೆಗರು, ಕೋಮುವಾದಿಗಳೆಂಬ ಅಪವಾದವಿದೆ. ಆದರೆ ಅದು ಸುಳ್ಳು. ಈ ವಿಚಾರವಾಗಿ ನಗರದ ಖಾಸಗಿ ಹೊಟೇಲ್‌ನಲ್ಲಿ ಸಮಾನ ಮನಸ್ಕ ಬ್ರಾಹ್ಮಣರ ಸಭೆ ನಡೆದಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬ್ರಾಹ್ಮಣರ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಲಾಯಿತು. ಅಲ್ಲದೇ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುವಾದನ್ನು ಸಭೆಯಲ್ಲಿ ಒಕ್ಕೊರಳಿನಿಂದ ವಿರೋಧಿಸಲಾಯಿತು.

ಸಮಾನ ಮನಸ್ಕ ಬ್ರಾಹ್ಮಣರ ಸಭೆಯ ಕುರಿತು “ದಿ ಹಿಂದೂಸ್ಥಾನ್ ಗಝೆಟ್”ನೊಂದಿಗೆ ಮಾತನಾಡಿದ ಚಿಂತಕ ಎಂ.ಜಿ. ಹೆಗ್ಡೆ, ಬ್ರಾಹ್ಮಣರನ್ನು ಕೇವಲ ಬಿಜೆಪಿಗೆ ಸೀಮಿತ ಗೊಳಿಸಲಾಗುತ್ತಿದೆ. ಅಲ್ಲದೇ ಅವರನ್ನು ಕೋಮುವಾದಿಗಳೆಂದು ಚಿತ್ರಿಸಲಾಗುತ್ತಿದೆ. ಆದರೆ ಬ್ರಾಹ್ಮಣರು ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದು, ಕೇವಲ ಬಿಜೆಪಿಯಲ್ಲಷ್ಟೇ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಕೋಮುವಾದವನ್ನು
ಸಭೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ದ ಹೆಸರಿನಲ್ಲಿ ಬ್ರಾಹ್ಮಣರ ಮೇಲಾಗುತ್ತಿರುವ ಕಿರುಕುಳವನ್ನು ವಿವರಿಸಿದ ಅವರು, ಕಾಂಗ್ರೆಸ್ ಪರ, ಕೋಮುವಾದದ ವಿರುದ್ಧ ಇರುವ ಬ್ರಾಹ್ಮಣರನ್ನು ಹಿಯಾಳಿಸಲಾಗುತ್ತಿದೆ. ಅವರನ್ನು ಬ್ರಾಹ್ಮಣರೇ ಅಲ್ಲ ಎಂದು ಬಿಂಬಿಸಲಾಗುತ್ತಿದೆ. ಅಷ್ಟೇ ಅಲ್ಲ ಕೋಮುವಾದದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುವ ಬ್ರಾಹ್ಮಣರಿಗೆ ಕೆಟ್ಟ ಪದ ಬಳಸಿ ನಿಂದಿಸುವುದು, ವೈವಾಹಿಕ ಸಂಬಂಧಗಳನ್ನು ತಪ್ಪಿಸುವಂತಹ ಕೆಲಸಗಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾನ ಮನಸ್ಕ ಬ್ರಾಹ್ಮಣರ ವೇದಿಕೆಗೆ ಸಂಘಟನೆಯ ರೂಪುರೇಷೆ ತಂದು ಮುಂದಿನ ದಿನಗಳಲ್ಲಿ ಕೋಮುವಾದದ ವಿರುದ್ಧ ಸಮಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಂ.ಜಿ. ಹೆಗ್ಡೆ ಹೇಳಿದರು.

Latest Indian news

Popular Stories