ಈಶ್ವರಪ್ಪನವರ ವಿಚಾರ ರಾಷ್ಟ್ರೀಯ ನಾಯಕರ ಗಮನದಲ್ಲಿದೆ; ಅವರ ಸ್ಪರ್ಧೆಯ ಪರಿಣಾಮ ಏನು ಕೂಡ ಆಗಲ್ಲ – ಬಿ.ವೈ ವಿಜಯೇಂದ್ರ

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿ, ರಾಜ್ಯದಲ್ಲಿ ವಾತಾವರಣ ನಮಗೆ ಪೂರಕವಾಗಿದೆ. ಮೋದಿ ಪ್ರಧಾನಿ ಆಗಬೇಕೆನ್ನುವುದು ಸಹಜ ಅಭಿಪ್ರಾಯವಾಗಿದೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಪ್ರತಿದಿನ ಉತ್ಸಾಹ ಕುಸಿಯುತ್ತಿದೆ. ಮೋದಿ ಜನಪ್ರಿಯ ಕಾರಣಕ್ಕೆ ರಾಜ್ಯದ ಯಾವುದೇ ಸಚಿವರು ಸ್ಪರ್ಧೆ ಮಾಡಿಲ್ಲ. ರಾಜ್ಯದಲ್ಲಿ ಕಾನೂನು ಸುಗ್ಗಿ ವ್ಯವಸ್ಥೆ ಹದಗೆಟ್ಟಿದೆ. ನೇಹಾ ಹತ್ಯೆ ಪ್ರಕರಣ, ಚನ್ನಗಿರಿ, ಗದಗ ಪ್ರಕರಣವನ್ನು ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ ಎಂದರು.

ಧಾರವಾಡ ಘಟನೆ ಬಗ್ಗೆ ವೈಯಕ್ತಿಕ ಕಾರಣಕ್ಕೆ ಆಗಿದೆ ಎನ್ನುತ್ತಾರೆ. ಇದು ಅಲ್ಪಸಂಖ್ಯಾತರ ತುಷ್ಟಿಕರಣ ರಾಜಕಾರಣವಾಗಿದೆ. ರಾಜ್ಯದ ಜನತೆಯ ರಕ್ಷಣೆ ವಿಚಾರ ಇವರಿಗೆ ಬೇಕಾಗಿಲ್ಲ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ. ಜನರು ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದರು.

ಕಾಂಗ್ರೆಸ್ ಜಾಹೀರಾತು ಕುರಿತು ಪ್ರತಿಕ್ರಿಯಿಸಿ ಹತಾಶ ಭಾವನೆಯಿಂದ ಈ ರೀತಿ ನಡೆದುಕೊಂಡಿದ್ದಾರೆ. ಗ್ಯಾರೆಂಟಿ ಯೋಜನೆಗಳ ವೈಫಲ್ಯತೆಯಿಂದ ಕಾಂಗ್ರೆಸ್ಸಿಗೆ ಜ್ಞಾನೋದಯವಾಗಿದೆ. ಗೆಲ್ಲುವುದಿಲ್ಲ ಎಂದು ಗ್ಯಾರಂಟಿ ಆದ ನಂತರ ಹತಾಶೆಯಿಂದ ಜಾಹೀರಾತು ನೀಡುತ್ತಿದ್ದಾರೆ. ಜನರೇ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಈಶ್ವರಪ್ಪ ಶಿವಮೊಗ್ಗದ ಅಖಾಡದಲ್ಲಿದ್ದಾರೆ. ಈಶ್ವರಪ್ಪನವರ ವಿಚಾರ ರಾಷ್ಟ್ರೀಯ ನಾಯಕರ ಗಮನದಲ್ಲಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಅದರ ಪರಿಣಾಮ ಏನು ಕೂಡ ಆಗಲ್ಲ. ರಾಘವೇಂದ್ರ ಜನಪ್ರಿಯ ಸಂಸದರು. ಮೋದಿಯ ಜನಪ್ರಿಯತೆ ಮತ್ತು ರಾಘವೇಂದ್ರ ಅಭಿವೃದ್ಧಿ ಕೆಲಸದಿಂದ ಎರಡು ಲಕ್ಷ ಕ್ಕೂ ಅಧಿಕ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.

ನೇಹಾ ಹತ್ಯೆ ಪ್ರಕರಣ ಪ್ರತಿಯೊಬ್ಬ ಮಹಿಳೆ ರಕ್ಷಣೆ ಇಲ್ಲ ಎಂದು ಯೋಚಿಸುತ್ತಿದ್ದಾರೆ. ಅತಿ ಶೀಘ್ರದಲ್ಲಿ ನೇಹಾ ಪ್ರಕರಣದ ಬಗ್ಗೆ ನಾವು ಹೋರಾಟ ಕೈಗೊಳ್ಳುತ್ತೇವೆ.

ಚುನಾವಣೆ ನಂತರ ಮೈತ್ರಿ ಕಡೆದುಕೊಳ್ಳುತ್ತಾರೆ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚುನಾವಣೆ ನಂತರ ಮೈತ್ರಿ ಹೇಗೆ ಹೋಗುತ್ತೆ ಅನ್ನೋದನ್ನ ಅವರೇ ನೋಡಲಿದ್ದಾರೆ . ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪರವಾಗಿ ವಾತಾವರಣ ಇದೆ. ಚುನಾವಣೆ ನಂತರ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತರುತ್ತಾರೆ ಎಂದರು.

Latest Indian news

Popular Stories