ಭೀಕರ ಅಪಘಾತಕ್ಕೆ ಹದಿನೈದು ಮಂದಿ ಮೃತ್ಯು

ಒಟ್ಟಾವಾ(ಕೆನಡಾ): ಕೆನಡಾದ ಮ್ಯಾನಿಟೋಬಾದ ಕಾರ್ಬೆರಿ ಪಟ್ಟಣದ ಬಳಿ ಸೆಮಿ ಟ್ರೈಲರ್ ಟ್ರಕ್ ಮತ್ತು ಹಿರಿಯ ನಾಗರಿಕರು ಪ್ರಯಾಣಿಸುತ್ತಿದ್ದ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು, 10 ಮಂದಿಗೂ ಹೆಚ್ಚು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಅಪಘಾತದಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ಕೆನಡಾದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇನ್ನೂ 10 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ರಸ್ತೆ ಅಪಘಾತವು ಕಾರ್ಬೆರಿಯ ಉತ್ತರದ ಟ್ರಾನ್ಸ್-ಕೆನಡಾ ಹೆದ್ದಾರಿಯಲ್ಲಿ ಸಂಭವಿಸಿದೆ. ರಸ್ತೆ ಅಪಘಾತದ ನಂತರ ತುರ್ತು ವಾಹನಗಳು ಮತ್ತು ಎರಡು ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದವು. ಈ ಅವಘಡದಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಕೆನಡಾದ ಪ್ರಧಾನಿ ಸಂತಾಪ
ರಸ್ತೆ ಅಪಘಾತ ದುರಂತಕ್ಕೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ‘ಕಾರ್ಬೆರಿ, ಮ್ಯಾನಿಟೋಬಾದಿಂದ ಬಂದ ಸುದ್ದಿ ನಂಬಲಾಗದಷ್ಟು ದುಃಖವಾಗಿದೆ. ಇಂದು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಆಳವಾದ ಸಂತಾಪ ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು.

Latest Indian news

Popular Stories