ಸ್ವಾಮೀಜಿಯ ಬಂಧನವಾಗಲಿ ಸತ್ಯ ಹೊರ ಬರುತ್ತೆ – ಬಹುಕೋಟಿ ಹಗರಣದ ಆರೋಪಿ ಚೈತ್ರಾ ಕುಂದಾಪುರ ಸ್ಪೋಟಕ ಹೇಳಿಕೆ

ಬೆಂಗಳೂರು: ರಾತ್ರಿಯಿಡಿ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಬಹುಕೋಟಿ ಹಗರಣದ ಆರೋಪಿ ಚೈತ್ರಾ ಕುಂದಾಪುರ ಅವರನ್ನು ಮತ್ತೆ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆ ತಂದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಸ್ವಾಮೀಜಿಯನ್ನು ಬಂಧಿಸಿ ಎಲ್ಲವೂ ಹೊರಗಡೆ ಬರುತ್ತದೆ ಎಂದಿದ್ದಾರೆ.

“ಸ್ವಾಮೀಜಿಯನ್ನು ಬಂಧಿಸಿ ಎಲ್ಲ ಸತ್ಯ ಹೊರಗಡೆ ಬರುತ್ತದೆ. ಇದರಲ್ಲಿ ದೊಡ್ಡ ದೊಡ್ಡವರು ಶಾಮೀಲಾಗಿರುವ ಸುಳಿವು ನೀಡಿದ್ದಾಳೆ. ಇಂದಿರಾ ಗಾಂಧಿ ಕ್ಯಾಂಟಿನ್ ಬಿಲ್ ಪೆಂಡಿಂಗ್ ಇದೆ ಅದಕ್ಕಾಗಿ ಈ ಷಡ್ಯಂತ್ರ ಪ್ಲ್ಯಾನ್ ಮಾಡಿದ್ದು ಎಂದು ಹೇಳಿದ್ದಾರೆ.

ಗೋವಿಂದ ಬಾಬು ಪೂಜಾರಿ ಅವರನ್ನು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚಿಸಿದ ಪ್ರಕರಣ ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು ವಂಚನೆ ಹಿಂದೆ ಅಡಕವಾಗಿರು ಹಲವು ಪ್ರಮುಖ ಹೆಸರುಗಳು ಮುನ್ನಲೆಗೆ ಬರುವ ಸಾಧ್ಯತೆ ಇದೆ.

Latest Indian news

Popular Stories