ಚೈತ್ರಾ ಕುಂದಾಪುರಳನ್ನು ಮೂರುವರೆ ಕೋಟಿ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿದೆ – ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಗೊವಿಂದಾ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಪಂಗನಾಮ ಹಾಕಿದ ಪ್ರಕರಣದಲ್ಲಿ ಗೃಹ ಸಚಿವರು ಇಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, “ಆಕೆಯನ್ನು ಮೂರುವರೆ ಕೋಟಿ ವಂಚನೆ ಪ್ರಕರಣದಲ್ಲಿ” ಬಂಧಿಸಲಾಗಿದೆ.

ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಸ್ವಾಮೀಜಿಯ ಹೆಸರು ಬಂದಿದ್ದರೆ ಅವರನ್ನು ತನಿಖೆಗೆ ಒಳಪಡಿಸುತ್ತಾರೆ ಎಂದು ಹೇಳಿದರು.

ಇಂದಿರಾ ಕ್ಯಾಂಟಿನ್ ಬಿಲ್ ಗಾಗಿ ಷಡ್ಯಂತ್ರ ಎಂದು ಆರೋಪಿ ಚೈತ್ರಾ ಉಲ್ಲೇಖಿಸಿದ್ದು ಅದರ ಕುರಿತು ವಿಚಾರಣೆ ನಡೆಸುತ್ತಾರೆ ಎಂದರು.

ಬಹುಕೋಟಿ ಹಗರಣದ ಆರೋಪಿ ಚೈತ್ರಾ ಪರ ವಕೀಲ ರಮನಪ್ಪ ಮಾತನಾಡಿ, “ಆಕೆ ಹಿಂದೂ ಪರ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಇದೊಂದು ರಾಜಕೀಯ ಪ್ರಕರಣ. ಆಕೆಯ ಮೇಲಿರುವುದು ಆರೋಪ ಮಾತ್ರ. ನ್ಯಾಯಾಲಯ ನಮಗೆ ಸಿಸಿಬಿ ಕಚೇರಿಗೆ ಹೋಗಿ ಮಾತನಾಡಲು ಅವಕಾಶ ನೀಡಿದೆ. ಮಾತನಾಡಿ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

Latest Indian news

Popular Stories