ಚಂದ್ರಯಾನ ಯಶಸ್ದು ತಿರುಪತಿ ತಿಮ್ಮಪ್ಪನದ್ದೋ, ವಿಜ್ಞಾನಿಗಳದ್ದೋ; ನಟ ಚೇತನ ಪ್ರಶ್ನೆ

ಬಾಗಲಕೋಟೆ: ಚಂದ್ರಯಾನ-3 ರ ಯಶಸ್ಸು ತಿರುಪತಿ ತಿಮ್ಮಪ್ಪನಿಗೆ ಸೇರಬೇಕೋ, ವಿಜ್ಞಾನಿಗಳಿಗೆ ಸೇರಬೇಕು ಎಂದು ನಟ ಚೇತನ್ ಪ್ರಶ್ನಿಸಿದ್ದಾರೆ.


ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿಜ್ಞಾನಿಗಳು ಚಂದ್ರಯಾನ-3 ರ ಯಶಸ್ಸಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ. ದೇಶವನ್ನು ವಿಶ್ವ ಮಟ್ಟದಲ್ಲಿ ಎತ್ತರಕ್ಕೆ ತೆಗೆದುಕೊಂಡು ಹೋಗಿ, ಯಾನ ಯಶಸ್ಸಿನ ಸಮಯದಲ್ಲಿ ತಿರುಪತಿಗೆ ಹೋಗಿ ತಿಮ್ಮಪ್ಪನ ಆಶೀರ್ವಾದ ಪಡೆದುಕೊಂಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಬರುತ್ತದೆ. ಎಲ್ಲೋ ಒಂದು ಕಡೆ ಅನುಮಾನಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.
ವಿಜ್ಞಾನಿಗಳು ವಿಜ್ಞಾನ ಮತ್ತು ವೈಜ್ಞಾನಿಕತೆ ಮೇಲೆ ನಂಬಿಕೆ ಇಡಬೇಕು. ಅದು ಬಿಟ್ಟು ತಿಮ್ಮಪ್ಪನ ಬಳಿ ಹೋಗಿ ಆಶೀರ್ವಾದ ಪಡೆದಿರುವ ನಡೆಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು.


ದೇಶ ವಿಜ್ಞಾನಿಗಳಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಹಾಗಾಗಿ ಅವರು ಧಾರ್ಮಿಕ ನಂಬಿಕೆ, ಪೂಜೆ ಪುನಸ್ಕಾರಕ್ಕಿಂತ ವಿಜ್ಞಾನ ಮತ್ತು ವೈಜ್ಞಾನಿಕ ದೃಷ್ಟಿಕೋನದತ್ತ ಹೆಚ್ಚು ಆಲೋಚನೆ ಮಾಡುವುದು ಸೂಕ್ತ . ವಿಜ್ಞಾನಿಗಳು ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದೊಂದಿದೆ ದೇಶವನ್ನು ಮುಂದಕ್ಕೆ ತೆಗೆದುಕೊಂಡ ಹೋಗಬೇಕು ಎಂದರು.
ನಟ ಉಪೇಂದ್ರ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಮಾಜದಲ್ಲಿ ಮುಖಂಡರುಗಳು, ಸಿಲೆಬ್ರೆಟಿಗಳು, ಪ್ರಮುಖರು ಮಾತನಾಡುವಾಗ, ಗಾದೆ ಮಾತುಗಳನ್ನು ಬಳಕೆ ಮಾಡುವಾಗ ಎಚ್ಚರಿಕೆಯಿಂದ ಪದ ಬಳಕೆ ಮಾಡಬೇಕು ಎಂದರು.


ಸಜಮಾಜ ಇಂದು ಜಾಗೃತಗೊಂಡಿದೆ. ಗಾದೆ ಮಾತು ಮತ್ತು ಕೆಲ ಪದಗಳ ಬಳಕೆಯಿಂದ ಯಾರಿಗೆ ಅವಮಾನ ಆಗಲಿದೆ ಎನ್ನುವ ಬಗೆಗೆ ದೊಡ್ಡವರು ಎನ್ನುವವರು ಆತ್ಮಾವಲೋಕನ ಮಾಡಿಕೊಂಡು ಮಾತನಾಡಬೇಕು. ಬ್ರಾಹ್ಮಣ್ಯದ ಬಗೆಗೆ ಎಚ್ಚರಿಕೆ ಇರಬೇಕು. ನಾವಾಡುವ ಮಾತುಗಳು ಯಾರನ್ನೂ ಅವಮಾನಗೊಳಿಸುವಂತಿರಬಾರದು. ಉತ್ತಮ ದೇಶ, ಉತ್ತಮ ರಾಜ್ಯ ಕಟ್ಟುವ ಆಲೋಚನೆಯಲ್ಲಿ ಇರುವವರು ಉತ್ತಮ ಮಾತುಗಳನ್ನು ಆಡಬೇಕು ಎಂದು ಹೇಳಿದರು.

Latest Indian news

Popular Stories