“ಗ್ಯಾರಂಟಿ” ಕುರಿತು ವ್ಯಂಗ್ಯ ಮಾಡುತ್ತಿದ್ದವರು ನಮ್ಮ ಗ್ಯಾರಂಟಿ ಕಾಪಿ ಮಾಡಿ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಕೈ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಮಾತನಾಡಿ, ಸಾಮಾಜಿಕ‌ ನ್ಯಾಯ ಒದಗಿಸುವ ಪಕ್ಷ ಯಾವದಾದ್ರೂ ಇದ್ರೆ ಅದೂ ಕಾಂಗ್ರೆಸ್ ಮಾತ್ರ ಎಂದು ಹೇಳಿದರು.

IMG 20240424 WA0056 Featured Story, State News

ಸಾಗರ್ ಖಂಡ್ರೆ ಪರ ಮತಯಾಚಿಸಿದ ಸಿಎಮ್, ಈ ಚುನಾವಣೆಯಲ್ಲಿ 6 ಜನ ಮಹಿಳೆಯರಿಗೆ ಟಿಕೆಟ್ ನೀಡಿದ್ದೇವು. ಎಲ್ಲ ಸಮುದಾಯಕ್ಕೂ ಟಿಕೆಟ್ ನೀಡುವ ಪ್ರಯತ್ನ ಮಾಡಿದ್ದೇವೆ. ಸಾಮಾಜಿಕ ನ್ಯಾಯ ಕಾಪಾಡುವ ಕೆಲಸವನ್ನ ಕಾಂಗ್ರೆಸ್ ಮಾಡ್ತಿದೆ. ದೇಶ ಅಭಿವೃದ್ದಿ ಆಗಬೇಕಾದರೆ ಎಲ್ಲ ಸಮುದಾಯಕ್ಕು ಪ್ರಾಧಾನ್ಯತೆ ನೀಡಬೇಕು. ಅಧಿಕಾರ ಮತ್ತು ಸಂಪತ್ತು ಬಲಾಢ್ಯರ ಕೈಯಲ್ಲಿ‌ ಇರಬಾರದು. ಬಲಾಡ್ಯರ ಕೈಯನಲ್ಲಿ ಇದ್ರೆ ಶೋಷಿತರಿಗೆ ಅನ್ಯಾಯವಾಗುತ್ತದೆ. ಬಡವರಿಗೆ ಶಕ್ತಿ ತುಂಬುವ ಕೆಲಸವನ್ನ ಕಾಂಗ್ರಸ್ ಮಾಡಿದೆ ಎಂದು ಹೇಳಿದರು.

ಗ್ಯಾರಂಟಿಗಳ ಮೂಲಕ ಜನರಿಗೆ ಶಕ್ತಿ‌ ತುಂಬಿದ್ದೇವೆ‌.
10 ಕೆಜಿ ಕೋಡಬೇಕಾದ್ರೆ ಅಕ್ಕಿ‌ ಕಡಿಮೆ ಇತ್ತು. ಆಗ ಕೇಂದ್ರಕ್ಕೆ ಕೇಳಿದ್ರೆ ಮೊದಲು ಕೊಡ್ತಿವಿ ಅಂದ್ರು.
ಆಮೇಲೆ ಕೊಡಲ್ಲಾ ಅಂದ್ರು. ನರೇಂದ್ರ ಮೋದಿ ಅವರೇ ನಿಮಗೇನಾದ್ರೂ ನಾಚಗೆ, ಮಾನ, ಮರ್ಯಾದೆ ಇದೆಯಾ…? ಜನರ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ನರೇಂದ ಮೋದಿ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೊದಲೂ ನಮ್ಮ ಗ್ಯಾರಂಟಿಗಳಿಗೆ ವ್ಯಂಗ್ಯವಾಡಿದ್ರು. ಈಗ ನಮ್ಮ ಗ್ಯಾರಂಟಿಗಳನ್ನೆ ಕಾಫಿ ಮಾಡಿ, ಮೋದಿ ಗ್ಯಾರಂಟಿ‌ ಮಾಡಿದ್ದಾರೆ. ಯಾವ ಕಾರಣಕ್ಕೂ ರಾಜ್ಯದಲ್ಲಿ ಗ್ಯಾರಂಟಿ ಬಂದ್ ಆಗಲ್ಲಾ. ನಾವೂ ಎಲ್ಲಿಯವರೆಗೆ ಅಧಿಕಾರದಲ್ಲಿ‌ ಇರ್ತೇವೋ ಅಲ್ಲಿಯವರೆಗೆ ಗ್ಯಾರಂಟಿ ಇರುತ್ತೆ‌. 10 ವರ್ಷಗಳಿಂದ ಪ್ರಧಾನಿ ಆಗಿದ್ದೀರಿ…? ಏನೂ ಮಾಡಿದ್ದೀರಿ.ಎಲ್ಲ ಬೆಲೆಗಳು ದುಬಾರಿ ಆಗಿವೆ. ಖೂಬಾ ಏನೂ ಮಾಡಿದ್ದಾರೆ, 10 ವರ್ಷ ಸಂಸದರಾಗಿದ್ದಾರೆ. ಕೇಂದ್ರ ಸಚಿವರಾಗಿದ್ದಾರೆ, ಏನಾದ್ರೂ ಅಭಿವೃದ್ದಿ ಮಾಡಿದ್ದಾರಾ..? ಖೂಬಾ ಅವರನ್ನ ಮನೆಗೆ ಕಳಿಸಿ, ಸಾಗರ್‌ನ ಗೆಲ್ಲಿಸಿ ಎಂದು ಜನರಿಗೆ ಮನವಿ ಮಾಡಿದರು.

Latest Indian news

Popular Stories