ಇಂದ್ರ ಪದವಿಗೆ ಏರಿದ ನಹುಶ ಮಹಾರಾಜನಿಗೆ ಅಧಿಕಾರದ ಮದ ಏರಿತ್ತು. ನಹುಶ ಮಹಾರಾಜನಂತೆ ಸಿದ್ದರಾಮಯ್ಯ ಶಾಪಗ್ರಸ್ಥರಾಗಬೇಕಾಬಹುದು ಎಂದು ಬೆಂಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ನಹುಶ ಮಹಾರಾಜ ಅಧಿಕಾರದ ಮದದಿಂದ ಅಷ್ಟಮುನಿಗಳು ಪಲ್ಲಕ್ಕಿ ಹೊರಬೇಕು ಎಂದಿದ್ದ. ಪಲ್ಲಕ್ಕಿ ಹೊರುವಾಗಲೇ ಮುನಿಗಳನ್ನು ಒದ್ದ ಪರಿಣಾಮ ಶಾಪಗ್ರಸ್ಥನಾದ. ಧರ್ಮರಾಯ ಬರುವ ತನಕ ಶಾಪ ವಿಮೋಚನೆಗೆ ಕಾಯಬೇಕಾಯಿತು. ಹಾಗೆ ಅಧಿಕಾರದ ಮದ ಒಳ್ಳೆಯದಲ್ಲ. ಸಂವಿಧಾನ ಬಗ್ಗೆ ಮಾತಾಡುವವರು ವಿಧಾನಸಭೆ ಬಾಗಿಲಿಗೆ ಒದ್ದಿದ್ದರು? ಈ ಹಿಂದೆ ಧರ್ಮೇಗೌಡರನ್ನು ಸಭಾಪತಿ ಪೀಠದಿಂದ ಎಳೆದು ಹಾಕಿದ್ರು? ಯಾವ ಕಾಯ್ದೆಯಡಿ ನಾಯಕರ ಸ್ವಾಗತಕ್ಕೆ ಅಧಿಕಾರಿಗಳನ್ನು ನೇಮಿಸಿದ್ರು. ವಿಷಯ ಡೈವರ್ಟ್ ಮಾಡಲು 10 ಶಾಸಕರ ಅಮಾನತು ಮಾಡಿದ್ದಾರೆ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.