ಬೇಬಿ ಡೆ ಕೇರ್’ನಲ್ಲಿ ನಿರ್ಲಕ್ಷ್ಯ – ತನಿಖೆಗೆ ಆದೇಶ

ಬೆಂಗಳೂರು: ನಗರದ ಮಕ್ಕಳ ಡೇ ಕೇರ್ ಸೆಂಟರ್ ವೊಂದರಲ್ಲಿ 2 ವರ್ಷದ ಹೆಣ್ಣು ಮಗುವಿನ ಮೇಲೆ ಮೂರು ವರ್ಷದ ಮಗು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆ ಬೆನ್ನಲ್ಲೇ ಡೇ ಕೇರ್ ಸೆಂಟರ್ ಗಳ ನಿರ್ಲಕ್ಶ್ಯದ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉತ್ತರಹಳ್ಳಿ ಸಮೀಪದ ಚಿಕ್ಕಲ್ಲಸಂದ್ರದಲ್ಲಿ ಇರುವ ಟೆಂಡರ್ ಫೂಟ್ ಎಂಬ ಡೇ ಕೇರ್ ಸೆಂಟರ್ ನಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಡೇ ಕೇರ್ ಸೆಂಟರ್ ಅಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಯಾ ಒಂದು ಮಗುವನ್ನು ಹೊರಗೆ ಕರೆದುಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಒಂದು ಮಗು ಇನ್ನೊಂದು ಮಗುವನ್ನು ಹಿಡಿದುಕೊಂಡು ಹೊಡೆದಿದೆ. ಸುಮಾರು ನಾಲ್ಕೈದು ನಿಮಿಷ ಹೊಡೆದರೂ ಮಕ್ಕಳನ್ನ ನೋಡಿಕೊಳ್ಳಲು ಅಲ್ಲಿಗೆ ಯಾರು ಬರುವುದಿಲ್ಲ.

ಈ ಹಿನ್ನೆಲೆಯಲ್ಲಿ ಡೇ ಕೇರ್ ಸೆಂಟರ್ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದು, ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಗೆ ನಗರ ಪೊಲೀಸರು ಸೂಕ್ತ ತನಿಖೆ ಮಡೆಸುವಂತೆ ಸೂಚನೆ ನೀಡಿದ್ದಾರೆ.

Latest Indian news

Popular Stories