ಸೌಹಾರ್ದಯುತ ನಡೆ: ಮಿಲಾದ್ ಉನ್ ನಬಿ ಮೆರವಣಿಗೆಯನ್ನು ಮುಂದೂಡಿದ ಮುಸ್ಲಿಮರು

ಹೈದರಾಬಾದ್: ಹೈದರಾಬಾದ್‌ನ ಮುಸ್ಲಿಂ ಸಮುದಾಯದ ಹಿರಿಯರು ಸೆಪ್ಟೆಂಬರ್ 28 ರಂದು ನಿಗದಿಯಾಗಿದ್ದ #ಮಿಲಾದ್‌ಉನ್‌ನಬಿ ಜೂಲೂಸ್ (ಮೆರವಣಿಗೆ)ಯನ್ನು ಮುಂದೂಡಲು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಪ್ಪಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬದಲಾಗಿ ಅಕ್ಟೋಬರ್ 1ರಂದು ನಡೆಯುವ ಮೀಲಾದ್ ಉನ್ ನಬಿ ಮೆರವಣಿಗೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಎರಡೂ ಸಮುದಾಯಗಳು ಒಪ್ಪಿಗೆ ಸೂಚಿಸಿವೆ.

ಮೆರವಣಿಗೆಯ ದಿನಾಂಕ ಬದಲಾಯಿಸುವ ನಿರ್ಧಾರವು ಗಂಗಾ ಜಮುನಾ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಭಾಗ ಎನ್ನಲಾಗಿದೆ. ಈ ನಿರ್ಧಾರವು ಸಹಬಾಳ್ಬೆಗೆ, ಸಾಮರಸ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದು ಪರಸ್ಪರ ಅರಿತು ಗೌರವಿಸುದರ ಭಾಗವಾಗಿದೆ.

ಹೈದರಾಬಾದ್ ಪೊಲೀಸ್ ಆಯುಕ್ತ ಸಿವಿ ಆನಂದ್ ಅವರು ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ನಗರದ ಅಭಿವೃದ್ಧಿಗೆ ಇಂತಹ ನಡೆ ಮಾದರಿಯಾಗಿದೆ ಎಂದು ಹೇಳಿದರು. ನಮ್ಮ ನಗರ ಗಂಗಾ ಜಮುನಿ ತೆಹಜೀಬ್ (ಸಂಸ್ಕೃತಿ) ಮತ್ತು ಜನರ ಸಹಬಾಳ್ವೆಗೆ ಉಜ್ವಲ ಉದಾಹರಣೆಯಾಗಿದೆ. ಇದೇ ಸಂದರ್ಭದಲ್ಲಿ ಆಚರಣೆಯ ಸಂದರ್ಭದಲ್ಲಿ ಪರಸ್ಪರರನ್ನು ಗೌರವಿಸಿ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯಲು ಕರೆ ನೀಡಿದ್ದಾರೆ.

Latest Indian news

Popular Stories