ಹೂಡೆ: ಸಾಲಿಡಾರಿಟಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಾಳೆ ಈದ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ

ಹೂಡೆ: ಸಾಲಿಡಾರಿಟಿ ಯೂತ್’ಮೂವ್ಮೆಂಟ್,ಉಡುಪಿ ಜಿಲ್ಲೆಯ ಅಂಗ ಸಂಸ್ಥೆ ಸಾಲಿಡಾರಿಟಿ ಸ್ಪೋರ್ಟ್ಸ್ ಕ್ಲಬ್, ಹೂಡೆ ವತಿಯಿಂದ ನಾಳೆ ಶನಿವಾರ ಸಾಲಿಹಾತ್ ಕ್ರೀಡಾಂಗಣದಲ್ಲಿ ಈದ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಮಧ್ಯಹ್ನಾ 2 ಗಂಟೆಗೆ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಲಿದ್ದು ಆದಿತ್ಯವಾರ ರಾತ್ರಿ ಮುಕ್ತಾಯಗೊಳ್ಳಲಿದೆ. ಸ್ಥಳೀಯ ಆಯ್ದ ಎಂಟು‌ ತಂಡಗಳು ಕ್ರಿಕೆಟ್ ಪಂದ್ಯಾಟದಲ್ಲಿ ಸೆಣಸಾಡಲಿದೆ.

ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅಶ್ರಫ್ ಕೋಡಿಬೆಂಗ್ರೆ, ಯಾಸೀನ್ ಮಲ್ಪೆ, ಸಾಲಿಡಾರಿಟಿ ಸ್ಪೋರ್ಟ್ ಕ್ಲಬ್ ಸಂಚಾಲಕ ನಬೀಲ್ ಗುಜ್ಜರ್’ಬೆಟ್ಟು, ಪಂದ್ಯಾವಳಿಯ ಸಂಚಾಲಕ ನಬೀಲ್ ಗುಜ್ಜರ್’ಬೆಟ್ಟು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮದಲ್ಲಿ ಜೆ.ಐ.ಎಚ್ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Latest Indian news

Popular Stories