ಈದ್-ಉಲ್-ಅಝ್ಹಾ: ಆಡು-ಕುರಿ-ಮೇಕೆಯ ಭರ್ಜರಿ ವ್ಯಾಪಾರ – ರೈತರ ಮೊಗದಲ್ಲಿ ಖುಷಿ!

ಉಡುಪಿ/ಬೆಂಗಳೂರು: ಮುಸ್ಲಿಮರ ಎರಡನೇ ಪವಿತ್ರ ಹಬ್ಬ ಈದ್-ಉಲ್-ಅಝ್ಹಾ ಸಮೀಪಿಸುತ್ತಿದ್ದಂತೆ ಕುರಿ-ಮೇಕೆ-ಆಡು ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಈ ಮೂಲಕ ರೈತರ ಮೊದಲ್ಲಿ ಸಂತೋಷ ಮೂಡಿದೆ.

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಟಗರು, ಕುರಿ ಹಾಗೂ ಮೇಕೆಗಳ ಮಾರಾಟ ಬಿರುಸುಗೊಂಡಿದೆ.ರಾಜ್ಯದ ನಾನಾ ಭಾಗಗಳಿಂದ ನೂರಾರು ಮಾರಾಟಗಾರರು ಮೈದಾನದಲ್ಲಿ ಬೀಡುಬಿಟ್ಟಿದ್ದಾರೆ. ಜೂ. 29ಕ್ಕೆ ಹಬ್ಬವಿದ್ದು, ಗ್ರಾಹಕರು ಈಗಲೇ ಕುರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ.

ಇವುಗಳ ಬೆಲೆ ಸುಮಾರು 10,000 ರೂ.ಗಳಿಂದ ಪ್ರಾರಂಭವಾಗಿ ಒಂದು ಲಕ್ಷವರೆಗೂ ಮಾರಾಟವಾಗುತ್ತಿವೆ. ಸುಮಾರು 100 ತೂಕದ ಟಗರ (ಕೊಬ್ಬಿದ ಗಂಡು ಕುರಿನ್ನು ರೂ.1 ಲಕ್ಷ- ಅದಕ್ಕಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ.

“ಟಗರುಗಳಿಗೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಅವುಗಳಿಗೆ ಬಾದಾಮಿ, ಗೋಡಂಬಿ ಮತ್ತು ಹಾಲಿನಂತಹ ಒಣ ಹಣ್ಣುಗಳನ್ನು ನೀಡಲಾಗುತ್ತದೆ. ಅದರ ಆಹಾರದ ವೆಚ್ಚವೇ ದಿನಕ್ಕೆ 600 ರೂವರೆಗೂ ಆಗುತ್ತದೆ. ಒಂದು ಟಗರು 100 ಕೆಜಿ ತೂಕವಾಗುವುದಕ್ಕೆ ಸುಮಾರು ಮೂರು ವರ್ಷಕ್ಕೂ ಹೆಚ್ಚು ಕಾಲ ಆರೈಕೆ ಮಾಡಬೇಕಾಗುತ್ತದೆ ಎಂದು ಟಗರು ಮಾರಾಟಗಾರರೊಬ್ಬರು ಹೇಳಿದ್ದಾರೆ.

ಕಳೆದ ವರ್ಷದ ಬೆಲೆಗೆ ಹೋಲಿಸಿದರೆ ಈ ಬಾರಿ ದರ ಹೆಚ್ಚಾಗಿದೆ. ಕಳೆದ ವರ್ಷ ಬನ್ನೂರು ಕುರಿಯೊಂದರ ಬೆಲೆ 15 ಸಾವಿರ ರೂ ಇತ್ತು. ಆದರೆ, ಈ ವರ್ಷ 20 ಸಾವಿರ ರೂ.ಆಗಿದೆ ಎಂದು ಗ್ರಾಹಕರರು ಹೇಳಿದ್ದಾರೆ.

ಬೆಳಗ್ಗೆಯಿಂದಲೇ ಮೈದಾನದಲ್ಲಿ ದೊಡ್ಡ ಮಟ್ಟದ ಜನ ಸೇರುತ್ತಿದ್ದು, ಸ್ಥಳದಲ್ಲಿ ನೂಕುನುಗ್ಗಲು ಎದುರಾಗುತ್ತಿದೆ. ಮೈದಾನದಲ್ಲಿ ಮಂಡ್ಯದ ಬಂಡೂರು (ಬನ್ನೂರು), ಕೊಪ್ಪಳದ ಗುಡ್ಡಗಾಡು ಪ್ರದೇಶದ ತೆಂಗುರಿ, ಉತ್ತರ ಕರ್ನಾಟಕದ ಡೆಕ್ಕನಿ, ರಾಜಸ್ಥಾನದ ಸಿರೋಹಿ ಮತ್ತು ಕೋಟಾ ಸೇರಿದಂತೆ ಸೇರಿದಂತೆ ತಳಿಗಳು ಇಲ್ಲಿ ಮಾರಾಟಕ್ಕಿಡಲಾಗಿದೆ.

ಕರಾವಳಿಯಲ್ಲೂ ಭರ್ಜರಿ ವ್ಯಾಪಾರ:

ಕರಾವಳಿ ಜಿಲ್ಲೆಗಳಲ್ಲೂ ಜಾನುವಾರು ವ್ಯಾಪಾರ ಜೋರಾಗಿ ನಡೆಯುತ್ತಿದ್ದು ಕುರಿ ವ್ಯಾಪಾರಿಗಳು ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಟೆಂಟ್ ಹಾಕಿ ವ್ಯಾಪಾರ ನಡೆಸುತ್ತಿದ್ದಾರೆ. ಸುಮಾರು 400 ರಿಂದ 450 ಕೆ.ಜಿಯವರೆಗೆ ಮಾರಾಟ ನಡೆಸಲಾಗುತ್ತಿದೆ.

ತ್ಯಾಗ-ಬಲಿದಾನದ ಹಬ್ಬವಾದ ಈದ್-ಉಲ್-ಅಝ್ಹಾ ಹಬ್ಬದ ಸಂದರ್ಭದಲ್ಲಿ ಜಾನುವಾರು ಬಲಿದಾನ ನೀಡಿ ಬಡವರಲ್ಲಿ ಹಂಚುವುದು ಸಂಪ್ರದಾಯ. ಆ ಹಿನ್ನಲೆಯಲ್ಲಿ ಮುಸ್ಲಿಮರು ಜಾನುವಾರು ಖರೀದಿಸಿ ಅದನ್ನು ಅತ್ಯುತ್ತಮವಾಗಿ ಸಾಕಿ ದೇವನ ಮಾರ್ಗದಲ್ಲಿ ಬಲಿದಾನ‌ ಮಾಡಿ ಎಲ್ಲರಿಗೂ ಮಾಂಸ ಹಂಚಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ‌.

Latest Indian news

Popular Stories