Election Result 2023 Live: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡದಲ್ಲಿ ಬಿಜೆಪಿಗೆ ಮುನ್ನಡೆ, ತೆಲಂಗಾಣದಲ್ಲಿ `ಕೈ’ ಪಡೆ ಹಿಡಿತ

ಬೆಳಿಗ್ಗೆ 11: 35 AMರ ಹೊತ್ತಿಗೆ ಪಂಚರಾಜ್ಯ ಚುನಾವಣೆಯ ಫಲಿತಾಂಶದ ವಿವರ
ಛತ್ತೀಸ್ ಗಢದಲ್ಲಿ ಬಿಜೆಪಿ ಮುನ್ನಡೆ
ಛತ್ತೀಸ್ ಗಢದಲ್ಲಿ ಹಾವು ಏಣಿ ಆಟದ ಬಳಿಕ ಇದೀಗ ಬಿಜೆಪಿ 49 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದೇವೇಳೆ ಕಾಂಗ್ರೆಸ್ ಮುನ್ನಡೆ 40 ಸ್ಥಾನಗಳಿಗೆ ಕುಸಿದಿದೆ.

ರಾಜಸ್ಥಾನದಲ್ಲಿ ಸ್ಪಷ್ಟ ಬಹುಮತದತ್ತ ಬಿಜೆಪಿ, ಕುಸಿದ ಕಾಂಗ್ರೆಸ್
ರಾಜಸ್ಥಾನದ 199 ಕ್ಷೇತ್ರಗಳಲ್ಲಿ ಇದೀಗ ಬಿಜೆಪಿಯು 104 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಕಾಂಗ್ರೆಸ್ 72ಕ್ಕೆ ಕುಸಿದಿದೆ. ಇತರರು 23 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.

ಮಧ್ಯಪ್ರದೇಶದಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ
ಮಧ್ಯಪ್ರದೇಶದಲ್ಲಿ ಬಿಜಪಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. 227 ಕ್ಷೇತ್ರಗಳ ಮತ ಎಣಿಕೆಯಲ್ಲಿ 156 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ 71 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ

ತೆಲಂಗಾಣದಲ್ಲಿ ಮುನ್ನಡೆ ಗಳಿಸಿದ ಕಾಂಗ್ರೆಸ್
ತೆಲಂಗಾಣದಲ್ಲಿ ಕಾಂಗ್ರೆಸ್ 70 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿ ಸರಳ ಬಹುಮತಕ್ಕೆ 60 ಸ್ಥಾನಗಳ ಅಗತ್ಯವಿದೆ. ಇದೇ ವೇಳೆ ಆಡಳಿತಾರೂಢ ಬಿ ಅರ್ ಎಸ್ 37 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಹಣಮಂತ ದೇಶಮುಖ
THG HYDERBAD

Latest Indian news

Popular Stories