ಕಾರವಾರ : ಕುಮಟಾ ತಾಲೂಕಿನ ಗೋಕರ್ಣದ ದೇವರಬಾವಿಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ.
ಗೋಕರ್ಣದ ದೇವರಬಾವಿ ಎಂಬಲ್ಲಿಸುಮಾರು 200ಮೀಟರ್ ವರೆಗೆ ಗುಡ್ಡದಲ್ಲಿ ಬಿರುಕು ಕಾಣಿಸಿದೆ.
ಗುಡ್ಡ ಇಬ್ಬಾಗವಾಗಿ ಧರೆಗುರುಳುವ ಆತಂಕ ಎದುರಾಗಿದೆ.
ಗುಡ್ಡದ ಕೆಳಭಾಗದಲ್ಲಿರುವ 10ಕ್ಕೂ ಹೆಚ್ಚು ಮನೆಗಳ ಜನರು ಆತಂಕದಲ್ಲಿ ಬದುಕುತ್ತಿದ್ದಾರೆ.
ಅತೀಯಾದ ಮಳೆ ಹಾಗೂ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿದ ಘಟನೆಯಿಂದ ಹೆದರಿದ ಜನರು ಮನೆ ಕಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಸುಮಾರು 50ಅಡಿ ಅಗಲ ಹಾಗೂ 200ಅಡಿ ಉದ್ದಕ್ಕೆ ಗುಡ್ಡ ಬಿರುಕು ಬಿಟ್ಟಿದೆ.ಯಾವುದೇ ಕ್ಷಣದಲ್ಲಾದರೂ ಗುಡ್ಡ ಕುಸಿಯುವ ಭೀತಿ ಎದುರಾಗಿದೆ.
…..