
ಕಮಠಾಣಾದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಬೀದರ್: ಪ್ರತಿ ವರ್ಷದಂತೆ ಈ ವರ್ಷವೂ ಕೂq ಬೀದರ್ ತಾಲೂಕಿನ ಕಮಠಾಣಾ ಗ್ರಾಮದಲ್ಲಿ ಡಿ.14, 15 ಮ ತ್ತು 16 ರಂದು ಶ್ರೀ ವೀರಭದ್ರೇಶ್ವರ ಜಾತ್ರಾ ಹಾಗೂ ಮಹಾ ರಥೋತ್ಸವ ಆದ್ದೂರಿಯಾಗಿ ಜರುಗಲಿದೆ.
ಡಿ. 14 ವರೆಗೆ ನಿತ್ಯ ಬೆಳಗ್ಗೆ ರುದ್ರಾಭಿಷೇಕ, ಸಾಯಂಕಾಲ ಬೆಳ್ಳುರ ಶ್ರೀ ಸಚ್ಚಿದಾನಂದ ಶ್ರೀ ಸಿದ್ಧಾರೂಢ ಮಠದ ಪೂಜ್ಯ ಮಾತೋಶ್ರೀ ಅಮೃತಾನಂದಮಯಿ ಇವರಿಂದ ಪ್ರವಚನ ನಡೆಯುವುದು.
ಡಿ.13 ರಂದು ರಂದು ಬೆ. 8 ಗಂಟೆಗೆ ಪೂಜ್ಯ ಶ್ರೀ ಷ.ಬ್ರ. ರಾಜೋಟೆಶ್ವರ ಶಿವಾಚಾರ್ಯರು ಇವರಿಂದ ಧ್ವಜಾರೋಹಣ ಹಾಗೂ ಸಾಯಂಕಾಲ ಭಜನ ಸಂಗೀತ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಕ್ರೀಕೆಟ್ ಪಂದ್ಯಾವಳಿ ನಡೆಯಲಿದೆ.
ಡಿ.14 ರಂದು ಸಾಮೂಹಿಕ ಲಕ್ಷ ಬಿಲ್ವಾರ್ಚಣೆ, ಸಾಮೂಹಿಕ ದೀಪೆÇೀತ್ಸವ ಹಾಗೂ ಸಾಯಂಕಾಲ ಶ್ರೀ ವೀರಭದ್ರೇಶ್ವರ ವೈಭವದ ಪಲ್ಲಕಿ ಉತ್ಸವ ನಡೆಯಲಿದೆ.
ಡಿ.15 ರಂದು ಬೇಳಗ್ಗೆ ಅಗ್ಗಿ ಪೂಜೆ ಮಹಾರಥೋತ್ಸವ, ಮಧ್ಯಾಹ್ನ ಧರ್ಮ ಸಭೆ ಹಾಗೂ ಮಹಾರಥೋತ್ಸವ
ಮತ್ತು ಮಹಾ ಪ್ರಸಾದ ನಡೆಯುವುದು ನಂತರ ಧರ್ಮ ಸಮಾರಂಭ ಸುಕ್ಷೇತ್ರದ ಹಾರಕೂಡ ಸಂಸ್ಥಾನದ ಹಿರೇಮಠದ ಶ್ರೀ ಷ.ಬ್ರ ಡಾ. ಚನ್ನವೀರ ಶಿವಾಚಾರ್ಯರಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕೆಂದ್ರ ಸಚಿವರು, ರಾಜ್ಯ ಸಚಿವರು, ಶಾಸಕರು, ಜನಪ್ರತಿನಿಧಿಗಳು, ರಾಜಕೀಯ ಧುರುಣರು, ಗಣ್ಯರು ಬಾಗವಹಿಸಲಿದ್ದಾರೆ.
ಡಿ. 16 ರಂದು ಮಧ್ಯಾಹ್ನ ಜಂಗಿ ಕುಸ್ತಿ ನಡೆಯುವುದು ಅದಕ್ಕಾಗಿ ಭಕ್ತಾಧಿಗಳು ಈ ಜಾತ್ರಾ ಮಹೋತ್ಸವದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ದೇs?ವರ ಹಾಗೂ ಸದ್ಗುರುಗಳ ಕೃಪಾಶಿರ್ವಾದ ಪಡೆದುಕೊಳ್ಳಬೇಕೆಂದು ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕುಶಾಲರಾವ ಯಾಬಾ ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ




