ಶಾರುಖ್‌ ಪತ್ನಿ ಗೌರಿ ಖಾನ್‌ ವಿರುದ್ಧ ಎಫ್‌ಐಆರ್‌

ಮುಂಬೈ: ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅವರ ಪತ್ನಿ ಗೌರಿ ಖಾನ್‌ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಗೌರಿ ಖಾನ್‌ ವಿರುದ್ಧ ಮುಂಬೈ ನಿವಾಸಿ  ಜಸ್ವಂತ್‌ ಶಾ ಎಂಬವರು ದೂರು ದಾಖಲಿಸಿದ್ದು ಸದ್ಯ ಗೌರಿ ವಿರುದ್ದ ಐಪಿಸಿ ಸೆಕ್ಷನ್‌ 409ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತುಳಸಿಯಾನಿ ಕಟ್ಟಡ ನಿರ್ಮಾಣ ಕಂಪನಿಗೆ ಬ್ರಾಂಡ್‌ ಅಂಬಾಸಿಡರ್‌ ಆಗಿರುವ ಗೌರಿ ಖಾನ್‌ ವಿರುದ್ಧ ಕಂಪನಿ ಮಾಡಿರುವ ತಪ್ಪಿನಿಂದಾಗಿ ದೂರು ದಾಖಲಾಗಿದೆ.

ʻತುಳಸಿಯಾನಿ ಕಟ್ಟಡ ನಿರ್ಮಾಣ ಕಂಪನಿಗೆ ಗೌರಿ ಖಾನ್‌ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದಾರೆ. ಇವರ ಪ್ರಭಾವದಿಂದ ನಾನು ಲಖನೌನಲ್ಲಿರುವ ತುಳಸಿಯಾನಿ ಕಂಪನಿ ನಿರ್ಮಾಣದ ಸುಶಾಂತ್‌ ಗಾಲ್ಫ್‌ಸಿಟಿಯಲ್ಲಿ ಫ್ಲಾಟ್‌ ಖರೀದಿಸಿದ್ದೆ. ಅದಕ್ಕಾಗಿ ನಾನು  86 ಲಕ್ಷ ರೂ. ಹಣವನ್ನೂ ಪಾವತಿಸಿದ್ದೇನೆ. ಆದರೆ ಕಂಪನಿ ನನಗೆ ನೀಡಬೇಕಾಗ ಫ್ಲಾಟನ್ನು ಬೇರೆಯವರಿಗೆ ನೀಡಿ ನನಗೆ ಮೋಸ ಮಾಡಿದೆʼ ಎಂದು ಜಸ್ವಂತ್‌ ಶಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಗೌರಿ ಖಾನ್‌ ಜೊತೆ ಕಂಪನಿಯ  ಎಂಡಿ ಅನಿಲ್‌ ಕುಮಾರ್‌ ತುಳಸಿಯಾನಿ, ನಿರ್ದೇಶಕ ಮಹೇಶ್‌  ತುಳಸಿಯಾನಿ ವಿರುದ್ಧವೂ ಜಸ್ವಂತ್‌ ಶಾ ದೂರು  ನೀಡಿದ್ದಾರೆ.

Latest Indian news

Popular Stories