
ಅಮೇರಿಕಾ ಮತ್ತು ಬ್ರಿಟನ್ ಪ್ರಧಾನಿ ಸಭೆ: ಜಿ 7 ದೇಶಗಳ ಸಭೆಗೆ ಒಪ್ಪಿಗೆ!
ನ್ಯೂಯಾರ್ಕ್: ಅಮೇರಿಕಾದ ಅಧ್ಯಕ್ಷ ಜೊಯ್ ಬಿಡೆನ್ ಮತ್ತು ಬ್ರಿಟಿಷ್ ಪ್ರಧಾನಿ ಮಾನವೀಯ ನೆರವು ಹಾಗೂ ನಿರಾಶಿತ್ರರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಚರ್ಚಿಸಲು ಮುಂದಾಗಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಮಂಗಳವಾರ, ಆಗಸ್ಟ್ 17, 2021 ರಂದು ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ಮಾತನಾಡಿದರು ಮತ್ತು ಮುಂದಿನ ವಾರ ಸಾಮಾನ್ಯ ಜಿ 7 ನಾಯಕರ ಸಭೆ ನಡೆಸಲು ಅವರು ಒಪ್ಪಿಕೊಂಡಿರುವ ಕುರಿತು ಶ್ವೇತಭವನ ತಿಳಿಸಿದೆ.
ಉಭಯ ನಾಯಕರು “ಮಿತ್ರರಾಷ್ಟ್ರಗಳ ಮತ್ತು ಪ್ರಜಾಪ್ರಭುತ್ವ ಪಾಲುದಾರರ ನಡುವೆ ಮುಂದುವರಿದ ನಿಕಟ ಸಮನ್ವಯದ ಅಗತ್ಯವನ್ನು ಚರ್ಚಿಸಿದ್ದಾರೆ. ಜಾಗತಿಕ ಸಮುದಾಯವು ಹೆಚ್ಚಿನ ಮಾನವೀಯ ನೆರವು ಮತ್ತು ನಿರಾಶ್ರಿತ, ಇತರ ದುರ್ಬಲ ಅಫ್ಘಾನ್ಗಳಿಗೆ ಬೆಂಬಲವನ್ನು ಒದಗಿಸಬಹುದು” ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.
ಈ ಮುಂಚಿನ ಅಧ್ಯಕ್ಷ ರಿಪಬ್ಲಿಕನ್ ಡೊನಾಲ್ಡ್ ಟ್ರಂಪ್ ಅವರು ಪಡೆಗಳನ್ನು ಹಿಂತೆಗೆದುಕೊಳ್ಳುವ ಒಪ್ಪಂದಕ್ಕೆ ಸಾಥ್ ನೀಡಿದ ರಿಪ್ಲಬಿಕನ್ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ನಿರ್ಧಾರವು ಅಮೇರಿಕಾದಲ್ಲಿ ಮತ್ತು ಯುಎಸ್ ಮಿತ್ರರಾಷ್ಟ್ರಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.




