Featured StoryINTERNATIONAL

ಯುದ್ಧ ಕೈದಿಯನ್ನು ಉಪಚರಿಸುತ್ತಿರುವ ವೀಡಿಯೋ ಬಿಡುಗಡೆಗೊಳಿಸಿದ ಹಮಾಸ್ – ಆಕೆ ಹೇಳಿದ್ದೇನು?

21 ವರ್ಷದ ಮಿಯಾ ಸ್ಕೆಮ್ ಅವರು ಸೂಪರ್ನೋವಾ ಸುಕ್ಕೋಟ್ ಸಂಗೀತ ಉತ್ಸವದಲ್ಲಿ ಭಾಗವಹಿಸುತ್ತಿದ್ದಾಗ ಹಮಾಸ್ ಕಾರ್ಯಕರ್ತರು ಸಂಗೀತ ಕಚೇರಿಯ ಮೇಲೆ ದಾಳಿ ಮಾಡಿದ್ದರು. ಈ ಘಟನೆಯಲ್ಲಿ ನೂರಾರು ಮಂದಿ ಹತರಾಗಿದ್ದರು.

ದಾಳಿಯ ಸಮಯದಲ್ಲಿ ಸುಮಾರು 200 ಜನರನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂದು ವರದಿಯಾಗಿದೆ. ಇಸ್ರೇಲಿ ಮಹಿಳೆಯೊಬ್ಬರ ವೀಡಿಯೋ ಇದೀಗ ಹಮಾಸ್‌ನ ಮಿಲಿಟರಿ ವಿಂಗ್ ಇಜ್ ಅದ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಬಿಡುಗಡೆ ಮಾಡಿರುವ ಕುರಿತು ವರದಿಯಾಗಿದೆ.

21 ವರ್ಷದ ಮಿಯಾ ಸ್ಕೆಮ್ ಚಿಕಿತ್ಸೆ ಪಡೆಯುತ್ತಿರುವುದನ್ನು ಈ ವೀಡಿಯೋ ದಲ್ಲಿ ನೋಡಬಹುದಾಗಿದೆ. ಕಿಬ್ಬುಟ್ಜ್ ರೀಮ್‌ನಲ್ಲಿ ನಡೆದ ಸೂಪರ್‌ನೋವಾ ಸುಕ್ಕೋಟ್ ಸಂಗೀತ ಉತ್ಸವದಲ್ಲಿ ಭಾಗವಹಿಸುತ್ತಿದ್ದಾಗ ಹಮಾಸ್ ಕಾರ್ಯಕರ್ತರು ಸಭೆಯ ಮೇಲೆ ದಾಳಿ ಮಾಡಿದ್ದರು. ಸಂಗೀತ ಉತ್ಸವದಲ್ಲಿ ಕನಿಷ್ಠ 260 ಜನರು ಕೊಲ್ಲಲ್ಪಟ್ಟಿದ್ದರು. ಮಿಯಾ ಸೇರಿದಂತೆ ಇತರರನ್ನು ಒತ್ತೆಯಾಳಾಗಿ ತೆಗೆದುಕೊಳ್ಳಲಾಗಿತ್ತು.

ಒಂದು ನಿಮಿಷದ ದೀರ್ಘಾವಧಿಯ ವೀಡಿಯೊ, ಮಿಯಾಳ ಗಾಯಕ್ಕೆ ಉಪಚರಿಸುತ್ತಿರುವುದು ಕಂಡು ಬಂದಿದೆ. ತನ್ನ ಗಾಯಕ್ಕೆ ಮೂರು ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಇಸ್ರೇಲಿ ಮಹಿಳೆ ಹೇಳುತ್ತಾರೆ.

“ಅವರು ನನ್ನನ್ನು ನೋಡಿಕೊಳ್ಳುತ್ತಿದ್ದಾರೆ, ಅವರು ನನಗೆ ಚಿಕಿತ್ಸೆ ನೀಡುತ್ತಿದ್ದಾರೆ, ಅವರು ನನಗೆ ಔಷಧಿಗಳನ್ನು ನೀಡುತ್ತಿದ್ದಾರೆ. ಎಲ್ಲವೂ ಸರಿಯಾಗಿದೆ” ಎಂದು ಮಿಯಾ ವೀಡಿಯೋದಲ್ಲಿ ನುಡಿದಿದ್ದಾರೆ. 

“ನನ್ನ ಕುಟುಂಬಕ್ಕೆ, ನನ್ನ ಹೆತ್ತವರಿಗೆ, ನನ್ನ ಒಡಹುಟ್ಟಿದವರಲ್ಲಿ ಆದಷ್ಟು ಬೇಗ ಮನೆಗೆ ಹಿಂತಿರುವಂತೆ ಮಾಡಿ ಎಂದು ನಾನು ಕೇಳುತ್ತೇನೆ. ದಯವಿಟ್ಟು ನಮ್ಮನ್ನು ಇಲ್ಲಿಂದ ಆದಷ್ಟು ಬೇಗ ಹೊರತೆಗೆಯಿರಿ” ಎಂದು ವಿನಂತಿಸಿದ್ದಾರೆ.

ಕಳೆದ ವಾರ ಮಿಯಾಳನ್ನು ಅಪಹರಿಸಲಾಗಿರುವ ಇಸ್ರೇಲ್ ರಕ್ಷಣಾ ಪಡೆಗಳು ಖಚಿತಪಡಿಸಿವೆ. ಅಧಿಕಾರಿಗಳು ಮಿಯಾ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button