Featured StoryINTERNATIONAL

ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಪ್ಯಾಲೆಸ್ತೇನ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ: ಇಸ್ರೇಲ್ ಗೆ ಹಮಾಸ್

ಗಾಜಾ: ಇಸ್ರೇಲ್ ನಲ್ಲಿ ಕೈದಿಗಳಾಗಿರುವ ಎಲ್ಲಾ ಪ್ಯಾಲೆಸ್ತೇನಿಗಳನ್ನು ಬಿಡುಗಡೆ ಮಾಡಿದರೆ ತಮ್ಮ ಬಳಿ ಇರುವ ಇಸ್ರೇಲ್ ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ.

ಗಾಜಾ ನಗರದಲ್ಲಿ ಇಸ್ರೇಲ್ ಭೂ ಸೇನೆಯ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಬೆನ್ನಲ್ಲೇ ಹಮಾಸ್ ಈ ಬೇಡಿಕೆ ಮುಂದಿಟ್ಟಿದೆ.

ಹಮಾಸ್ ಬಳಿ ರಷ್ಯಾ-ಇಸ್ರೇಲಿ ಉಭಯ ದೇಶಗಳ ಪೌರತ್ವ ಹೊಂದಿರುವ 8 ನಾಗರಿಕರನ್ನುಪತ್ತೆ ಮಾಡುವುದಕ್ಕೆ ಯತ್ನಿಸುತ್ತಿರುವುದಾಗಿ ಹಮಾಸ್ ಹೇಳಿತ್ತು. ಹಮಾಸ್ ನ್ನು ಉಗ್ರ ಸಂಘಟನೆ ಎಂದು ಹೇಳದ ರಷ್ಯಾ ಜೊತೆ ಹಮಾಸ್ ಗೆ ಉತ್ತಮ ಸಂಬಂಧವಿದ್ದು, ಗಾಜಾದಲ್ಲಿ ಒತ್ತೆಯಾಳುಗಳಾಗಿರುವ ತನ್ನ ನಾಗರಿಕರನ್ನು ಬಿಡುಗಡೆ ಮಾಡಲು ರಷ್ಯಾ ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರೆಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button