Featured StoryState News

ಹಾನಗಲ್ ಅತ್ಯಾಚಾರ ಪ್ರಕರಣ: ಅನೈತಿಕ ಪೋಲಿಸ್ ಗಿರಿಯನ್ನು ಮಟ್ಟ ಹಾಕಲು ವೆಲ್ ಫೇರ್ ಪಾರ್ಟಿ ಒತ್ತಾಯ

ಬೆಂಗಳೂರು: ಹಾವೇರಿ ಜಿಲ್ಲೆ ಹಂಗಲ್ ನಲ್ಲಿ ನಡೆದ ನೈತಿಕ ಪೋಲಿಸ್ ಗಿರಿ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡನೀಯ.

ಮನದಲ್ಲಿ ಕೋಮು ವಿಷ ತುಂಬಿಕೊಂಡು ಸಂವಿಧಾನ ತತ್ವಕ್ಕೇ ಅಪಚಾರಗೈದು ಕಾನೂನನ್ನು ಕೈಗೆತ್ತಿಕೊಳ್ಳುವ ಇಂತಹ ಪ್ರಕ್ರಿಯೆಯನ್ನು ಸರಕಾರ ಮಟ್ಟ ಹಾಕಲೇಬೇಕು. ಎಂದು ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ. ನಂತರ ಮಾತನಾಡುತ್ತಾ, ಭವಿಷ್ಯದಲ್ಲಿ ಇದು ತುಂಬಾ ಅಪಾಯಕಾರಿ. ಕಾನೂನಿನ ಬಗ್ಗೆ ಜನರಿಗೆ ಭಯ ಹೊರಟು ಹೋಗಿರುವುದೇ ಇಂತಹ ಪ್ರಕ್ರಿಯೆಗೆ ಕಾರಣವಾಗಿದೆ. ಸಾಮೂಹಿಕ ಅತ್ಯಾಚಾರ ಗೈದ ಪ್ರಕರಣ ಸಾಮಾನ್ಯವಲ್ಲ. ಇದುವರೆಗೆ ಬಂದಿತರಾದ ಆರು ಮಂದಿಯಲ್ಲಿ ಇಬ್ಬರು ಆ ಪ್ರಕರಣದಲ್ಲಿ ಭಾಗಿಯಾಗದವರಲ್ಲ ನನಗೆ ಆ ಇಬ್ಬರ ಫೋಟೋ ಮಾತ್ರ ತೋರಿಸಿದ್ದು ಅವರೀರ್ವರೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಎಂಬ ಸಂತ್ರಸ್ತೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆದ್ದರಿಂದ ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವುದೇ ರಾಜಕೀಯ ಮಾಡದೆ ಪ್ರಾಮಾಣಿಕ ವಾಗಿ ತನಿಖೆ ನಡೆಸಿ ಸಂತ್ರಸ್ತೆಗೆ ನ್ಯಾಯ ದೊರಕಿಸಿ ಕೊಡಬೇಕಾದುದು ಸರಕಾರದ ಕರ್ತವ್ಯ ಪ್ರಕರಣ ಮುಚ್ಚಿ ಹಾಕಲು ಸರಕಾರ ಪ್ರಯತ್ನಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವೂ ಗಮನಾರ್ಹ. ” ಎಂದವರು ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button