Featured StoryINTERNATIONAL

ತೀವ್ರಗೊಂಡ ಪ್ರತಿಭಟನೆ; ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ

ಬಾಂಗ್ಲಾದೇಶ: ಜಮಾಅತೆ ಇಸ್ಲಾಮಿ ನಿಷೇಧದ ನಂತರ ತೀವ್ರಗೊಂಡ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇದೀಗ 300 ಮಂದಿ ಹತರಾಗಿದ್ದರು. ಇದೀಗ ಬಂದ‌ಮಾಹಿತಿಯ ಪ್ರಕಾರ ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ.

ಪ್ರತಿಭಟನಾಕಾರು ಪ್ರಧಾನಿ ಕಚೇರಿ ಬಳಿ ಧಾವಿಸಿದ ನಂತರ ಅವರು ಸುರಕ್ಷಿತ ಸ್ಥಳಕ್ಕೆ ಪರಾರಿಯಾಗಿದ್ದು ಇದೀಗ ಅವರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಮೀಸಲಾತಿ ವಿಚಾರದಲ್ಲಿ ಆರಂಭವಾದ ಪ್ರತಿಭಟನೆ ನಂತರ ಸುಪ್ರೀಮ್ ಆದೇಶದ ನಂತರ ಹಿಂಪಡೆಯಲಾಗಿತ್ತು. ನಂತರ ಜಮಾಅತೆ ಇಸ್ಲಾಮಿ ಸಂಘಟನೆಯನ್ನು ಹಿಂಸಾಚಾರಕ್ಕೆ ಹೊಣೆಯಾಗಿಸಿ ನಿಷೇಧಿಸಿದಾಗ ಮತ್ತೆ ಪ್ರತಿಭಟನೆ ಭುಗಿಲೆದ್ದು 300 ಮಂದಿ ಪ್ರತಿಭಟನೆಯಲ್ಲಿ ಮೃತಪಟ್ಟಿದ್ದರು. ಆದರೂ ಪಟ್ಟು‌ಬಿಡದ ಪ್ರತಿಭಟನಕಾರರು ಇದೀಗ ಶೇಖ್ ಹಸೀನಾರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button