
Featured StoryClimate and environment
ಭಾರತದಲ್ಲಿ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆ | ಅಧ್ಯಯನ ವರದಿ
ಈ ಬಾರಿ ಸರಾಸರಿ ಮಳೆ ಲೆಕ್ಕ ಹಾಕಿದರೆ ಭಾರತದಲ್ಲಿ ಮಳೆ ತೀವ್ರ ಪ್ರಮಾಣದಲ್ಲಿ ಕಡಿಮೆ ಮಳೆಯಾಗಿದೆ. ಈತನ್ಮಧ್ಯೆ ಭಾರತದಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ.
ಭಾರತದಾದ್ಯಂತ ನಗರಗಳು ಬಿಸಿಯಾಗಲಿವೆ. ದೇಶದ ವಾಯುವ್ಯ, ಮಧ್ಯ ಮತ್ತು ದಕ್ಷಿಣ-ಮಧ್ಯ ಭಾಗಗಳು ಶಾಖಯುಕ್ತ ಬಿಸಿ ತಾಣಗಳಾಗಿ ಹೊರಹೊಮ್ಮಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಹೊಸ ವಿಶ್ಲೇಷಣೆಯು ಯೋಜಿಸಿದೆ ಮತ್ತು ವಿಜ್ಞಾನಿಗಳು ಸಹ ಎಚ್ಚರಿಸಿದ್ದಾರೆ. ತೀವ್ರವಾದ ಶಾಖದ ಆವರ್ತನವು ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಅಧ್ಯಯನ ಕಂಡು ಹಿಡಿದಿದೆ.
ಬಿಸಿ ಗಾಳಿಯು ನಾಲ್ಕರಿಂದ ಏಳು ಪಟ್ಟು ಹೆಚ್ಚಾಗಲಿದೆ ಎಂದು ಡಿಎಸ್‌ಟಿಯ ಮಹಾಮಾನ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಕ್ಲೈಮೇಟ್ ಚೇಂಜ್ ರಿಸರ್ಚ್‌ನ ವಿಶ್ಲೇಷಣೆಯು ಭವಿಷ್ಯ ನುಡಿದಿದೆ. ಇದು ಮಧ್ಯ ಮತ್ತು ದೀರ್ಘಾವಧಿಯಲ್ಲಿ ಐದರಿಂದ 10 ಪಟ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.




